
ಕೀವ್: ರಷ್ಯಾವು 450 ಡ್ರೋನ್ ಮತ್ತು 70 ಕ್ಷಿಪಣಿಗಳ ಮೂಲಕ ಉಕ್ರೇನ್ ಮೇಲೆ ಸೋಮವಾರ ರಾತ್ರಿ ದಾಳಿ ಮಾಡಿದೆ.
‘ಉಕ್ರೇನ್‌ನ ಐದು ಪ್ರದೇಶಗಳಲ್ಲಿ ರಷ್ಯಾ ವಿಧ್ವಂಸಕ ಕೃತ್ಯ ಎಸಗಿದ್ದು, ಉಷ್ಣ ವಿದ್ಯುತ್ ಸ್ಥಾವರಕ್ಕೂ ಹಾನಿಯಾಗಿದೆ. ಜನರನ್ನು ಕಷ್ಟಕ್ಕೆ ದೂಡಲು ಅತಿ ಚಳಿ ಇರುವ ದಿನಗಳನ್ನೇ ಆಯ್ಕೆ ಮಾಡಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಂಗಳವಾರ ತಿಳಿಸಿದ್ದಾರೆ.
ದಾಳಿಯಿಂದಾಗಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸತಿ ಕಟ್ಟಡಗಳು, ಶಿಶುವಿಹಾರ ಮತ್ತು ಗ್ಯಾಸ್ ಸ್ಟೇಷನ್‌ಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ತುರ್ತು ಸೇವಾ ವಿಭಾಗ ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಕದನವಿರಾಮ ಕುರಿತು ಅಮೆರಿಕ ಮಧ್ಯಸ್ಥಿಕೆಯಲ್ಲಿ ಬುಧವಾರ ಮತ್ತು ಗುರುವಾರ ಅಬುಧಾಬಿಯಲ್ಲಿ ಸಭೆ ನಿಗದಿಯಾಗಿದೆ. ಆದರೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ.
ಹಾರ್ಕಿವ್ ಪ್ರದೇಶದಲ್ಲೂ ಹಾನಿ ಸಂಭವಿಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಎರಡನೇ ಮಹಾಯುದ್ಧದಲ್ಲಿ ಉಕ್ರೇನ್ ಭಾಗವಹಿಸುವಿಕೆ ಕುರಿತ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೂ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.