ADVERTISEMENT

ಮಿತ್ರ ರಾಷ್ಟ್ರಗಳ ಜತೆ ವಿಮಾನ ಸಂಚಾರ ಪುನರಾರಂಭಿಸಲು ರಷ್ಯಾ ಚಿಂತನೆ

ರಾಯಿಟರ್ಸ್
Published 4 ಏಪ್ರಿಲ್ 2022, 16:13 IST
Last Updated 4 ಏಪ್ರಿಲ್ 2022, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ರಷ್ಯಾ ಮುಂದಾಗಿದೆ.

ಏಪ್ರಿಲ್ 9ರಿಂದ 52 ಮಿತ್ರರಾಷ್ಟ್ರಗಳ ಜತೆ ವಿಮಾನ ಪ್ರಯಾಣ ಮುಂದುವರಿಸಲು ಚಿಂತನೆ ನಡೆದಿದೆ ಎಂದು ರಷ್ಯಾ ಪ್ರಧಾನಿ ಮಿಖೈಲ್ ಮಿಶುಸಿನ್ ಹೇಳಿದ್ದಾರೆ.

ಅರ್ಜೆಂಟಿನಾ, ದಕ್ಷಿಣ ಆಫ್ರಿಕಾ ಮತ್ತು ಇತರ ಮಿತ್ರ ರಾಷ್ಟ್ರಗಳ ಜತೆ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ಮತ್ತೆ ಆರಂಭಿಸುವ ಕುರಿತು ರಷ್ಯಾ ಚಿಂತನೆ ನಡೆಸಿದೆ.

ADVERTISEMENT

ಉಕ್ರೇನ್ ಮೇಲಿನ ಮಿಲಿಟರಿ ಆಕ್ರಮಣದ ಬಳಿಕ ರಷ್ಯಾ ಮೇಲೆ ವಿವಿಧ ರಾಷ್ಟ್ರಗಳು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಮತ್ತು ಮಾರ್ಗಗಳಲ್ಲಿ ಸಮಸ್ಯೆ ಎದುರಾಗಿತ್ತು.

ಆದರೆ, ಏಪ್ರಿಲ್ 9ರ ಬಳಿಕ 52 ರಾಷ್ಟ್ರಗಳ ಜತೆ ವಿಮಾನಯಾನ ಮತ್ತೆ ಆರಂಭಿಸಲು ರಷ್ಯಾ ಮುಂದಾಗಿದೆ. ಕೋವಿಡ್ ನಿರ್ಬಂಧದ ಬಳಿಕ ವಿವಿಧ ರಾಷ್ಟ್ರಗಳ ಮಧ್ಯೆ ವಿಮಾನ ಸಂಚಾರ ರದ್ದಾಗಿತ್ತು.

ಉಕ್ರೇನ್ ಜತೆಗಿನ ಸಂಘರ್ಷದ ಬಳಿಕ ರಷ್ಯಾ, 36 ರಾಷ್ಟ್ರಗಳ ಜತೆ ವಿಮಾನ ಸಂಚಾರ ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.