ADVERTISEMENT

ಸೆರೆಯಾದ ರಷ್ಯಾ ಯೋಧರನ್ನು ಕರೆದೊಯ್ಯಲು ಅವರ ತಾಯಂದಿರು ಬರಲಿ: ಉಕ್ರೇನ್‌ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 15:58 IST
Last Updated 2 ಮಾರ್ಚ್ 2022, 15:58 IST
ರಷ್ಯಾ ನಡೆಸಿರುವ ದಾಳಿಯಲ್ಲಿ ಹಾನಿಗೊಳಗಾದ ಉಕ್ರೇನ್‌ನ ಸಾರ್ವಜನಿಕ ಆಸ್ತಿಗಳು
ರಷ್ಯಾ ನಡೆಸಿರುವ ದಾಳಿಯಲ್ಲಿ ಹಾನಿಗೊಳಗಾದ ಉಕ್ರೇನ್‌ನ ಸಾರ್ವಜನಿಕ ಆಸ್ತಿಗಳು   

ಕೀವ್‌: ಯುದ್ಧಭೂಮಿಯಲ್ಲಿ ಸೆರೆಯಾಗಿರುವ ರಷ್ಯಾ ಸೈನಿಕರನ್ನು ಕರೆದೊಯ್ಯಲು ಅವರ ತಾಯಂದಿರು ಬರಲಿ ಎಂಬ ಸಂದೇಶವನ್ನು ಉಕ್ರೇನ್‌ ರವಾನಿಸಿದೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ಈ ಸಂದೇಶದ ಮೂಲಕ ಮಾಸ್ಕೋದ ಆಡಳಿತಗಾರರನ್ನು ಮುಜುಗರಕ್ಕೀಡು ಮಾಡುವುದು ಉಕ್ರೇನ್‌ನ ಸ್ಪಷ್ಟ ಉದ್ದೇಶವಾಗಿದೆ.

‘ಯುದ್ಧಭೂಮಿಯಲ್ಲಿ ಸೆರೆಹಿಡಿಯಲ್ಪಟ್ಟ ರಷ್ಯಾದ ಯೋಧರ ತಾಯಂದಿರು ಆತಂಕದಲ್ಲಿರುತ್ತಾರೆ. ಈ ಸೆರೆಯಾಳುಗಳನ್ನು ಕರೆದೊಯ್ಯಲು ಅವರ ತಾಯಂದಿರನ್ನು ಆಹ್ವಾನಿಸಲಾಗಿದೆ’ ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯ ತಿಳಿಸಿದೆ.

‘ನಮ್ಮ ಬಳಿ ಇರುವ ರಷ್ಯಾದ ಸೈನಿಕರನ್ನು ಅವರ ತಾಯಂದಿರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ’ ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ (ಫೆ.24) ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದು, ಇದರ ಬೆನ್ನಲ್ಲೇ ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ವಾಯುನೆಲೆಗಳು, ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.