ADVERTISEMENT

ಕೀವ್‌ ನಗರದ ಮೇಲೆ ವಾಯು ಮಾರ್ಗದಲ್ಲಿ ದಾಳಿ ಸಾಧ್ಯತೆ: ಹೈ ಅಲರ್ಟ್ ಘೋಷಣೆ

ಏಜೆನ್ಸೀಸ್
Published 9 ಮಾರ್ಚ್ 2022, 8:24 IST
Last Updated 9 ಮಾರ್ಚ್ 2022, 8:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್: ಉಕ್ರೇನ್‌ ರಾಜಧಾನಿ ಕೀವ್‌ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಾಯು ಮಾರ್ಗವಾಗಿ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆಯಿದ್ದು, ಬುಧವಾರ ಹೈ-ಅಲರ್ಟ್ ಘೋಷಿಸಲಾಗಿದೆ.

ದಾಳಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ವರದಿಯಾಗಿದೆ.

‘ಕೀವ್‌ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಲಾಗಿದೆ’ ಎಂದು ಪ್ರಾದೇಶಿಕ ಆಡಳಿತ ಮುಖ್ಯಸ್ಥ ಒಲೆಕ್ಸಿ ಕುಲೆಬಾ ಮಾಹಿತಿ ನೀಡಿದ್ದಾರೆ.

ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಸತತ ಎರಡು ವಾರಗಳಿಂದ ಕ್ಷಿಪಣಿ, ಶೆಲ್‌ ದಾಳಿ ನಡೆಸಿದೆ. ನಾಗರಿಕರ ಸ್ಥಳಾಂತರಕ್ಕೆ ಅನುವಾಗುವ ನಿಟ್ಟಿನಲ್ಲಿ ಮಾನವೀಯ ನೆಲೆಯ ಮೇಲೆ ರಷ್ಯಾ ಬುಧವಾರ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ದಾಳಿಯಲ್ಲಿ ಎರಡು ರಾಷ್ಟ್ರಗಳ ನಾಗರಿಕರು ಸೇರಿದಂತೆ ಸೈನಿಕರು ಮೃತಪಟ್ಟಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್‌ನ ಕೆಲವು ಪ್ರದೇಶಗಳ ಮೇಲೆ ಅಧಿಪತ್ಯ ಸಾಧಿಸಿವೆ. ಆದರೆ, ಕೀವ್ ವಶಪಡಿಸಿಕೊಳ್ಳಲು ಮುಂದಾದ ರಷ್ಯಾ ಪಡೆಗಳಿಗೆ ಉಕ್ರೇನಿಯನ್ನರು ತೀವ್ರ ಪ್ರತಿರೋಧ ಒಡ್ಡಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.