ADVERTISEMENT

ರಷ್ಯಾ-ಉಕ್ರೇನ್ ಸಂಘರ್ಷ: ನ್ಯಾಟೊ ಪೂರ್ವಕ್ಕೆ ಕಾಲಿಡಬಾರದು –ಚೀನಾ

ಏಜೆನ್ಸೀಸ್
Published 19 ಮಾರ್ಚ್ 2022, 22:10 IST
Last Updated 19 ಮಾರ್ಚ್ 2022, 22:10 IST
ರಷ್ಯಾ ಅತಿಕ್ರಮಣದ ವಿರುದ್ಧ ಹೋರಾಟ ನಡೆಸಲು ತರಬೇತಿ ಪಡೆಯುತ್ತಿರುವ ಉಕ್ರೇನ್ ಸೈನಿಕರು –ಎಪಿ/ಪಿಟಿಐ ಚಿತ್ರ
ರಷ್ಯಾ ಅತಿಕ್ರಮಣದ ವಿರುದ್ಧ ಹೋರಾಟ ನಡೆಸಲು ತರಬೇತಿ ಪಡೆಯುತ್ತಿರುವ ಉಕ್ರೇನ್ ಸೈನಿಕರು –ಎಪಿ/ಪಿಟಿಐ ಚಿತ್ರ   

ಬೀಜಿಂಗ್‌: ನ್ಯಾಟೊ ಪೂರ್ವಕ್ಕೆ ಕಾಲಿಡುವುದಿಲ್ಲವೆಂದು ನೀಡಿರುವ ವಾಗ್ದಾನಕ್ಕೆ ಬದ್ಧವಾಗಿರಬೇಕು ಎಂದು ಚೀನಾ ಶನಿವಾರ ಹೇಳಿದೆ.

ರಷ್ಯಾದ ವಾದ ಪುಷ್ಟೀಕರಿಸಿರುವ ಚೀನಾದ ರಾಯಭಾರಿ, ‘ನ್ಯಾಟೊದ ಮತ್ತಷ್ಟು ಮುಂದೆ ಹೋದರೆ, ಅದು ಮಾಸ್ಕೊದ ಹೊರವಲಯದ ಸಮೀಪಕ್ಕೆ ಬಂದು ನಿಲ್ಲಲಿದೆ. ಆಗ ನ್ಯಾಟೊದ ಕ್ಷಿಪಣಿಗಳು ಕ್ರೆಮ್ಲಿನ್‌ಗೆ ಕೇವಲ ಏಳು ಅಥವಾ ಎಂಟು ನಿಮಿಷಗಳಲ್ಲಿ ಬಂದು ಬೀಳಲಿವೆ’ ಎಂದು ಅಭಿಪ್ರಾಯಪಟ್ಟರು.

ಚೀನಾದ ಉಪ ವಿದೇಶಾಂಗ ಸಚಿವ ಲೆ ಯುಚೆಂಗ್, ಉಕ್ರೇನ್ ಆಕ್ರಮಣದ ನಂತರ ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳನ್ನು ಟೀಕಿಸಿದರು.

ADVERTISEMENT

‘ಶೀತಲ ಸಮರದ ಮನಸ್ಥಿತಿ ಮತ್ತು ಅಧಿಕಾರ ರಾಜಕಾರಣವೇ ಉಕ್ರೇನ್‌ನಲ್ಲಿನ ಯುದ್ಧಕ್ಕೆ ಮೂಲ ಕಾರಣ. ಪ್ರಮುಖ ದೇಶವನ್ನು, ಅದರಲ್ಲೂ ಅಣುಶಕ್ತ ದೇಶವನ್ನು ಮೂಲೆಗುಂಪಾಗಿಸುವ ಆಲೋಚನೆ ತುಂಬಾ ಭಯಾನಕ ಪರಿಣಾಮ ಉಂಟುಮಾಡಲಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.