ಬರ್ಲಿನ್: ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬುದಾಗಿ ಉಕ್ರೇನ್ ಮಾಹಿತಿ ನೀಡಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಹೇಳಿದೆ.
ಕಳೆದ ವಾರ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ಹಾನಿಗೊಳಗಾಗಿತ್ತಲ್ಲದೇ, ಆತಂಕಕ್ಕೆ ಕಾರಣವಾಗಿತ್ತು.
ದಾಳಿ ನಂತರ ಅಣು ವಿದ್ಯುತ್ ಸ್ಥಾವರದ ಸ್ಥಿತಿ ಕ್ಲಿಷ್ಟವಾಗಿದೆ. ಆದಾಗ್ಯೂ, ದುರಸ್ತಿ ಕಾರ್ಯವನ್ನು ತಂತ್ರಜ್ಞರು ಕೈಗೊಂಡಿದ್ದಾರೆ. ಘಟಕದ ಬಳಿಯ ಒಂದು ವಿಭಾಗವನ್ನು ದುರಸ್ತಿಗೊಳಿಸಲಾಗಿದೆ. ಆದರೆ ಇನ್ನಷ್ಟು ಸ್ಥಳಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ ಎಂದು ಐಎಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.