ADVERTISEMENT

ನಾನು, ಪುಟಿನ್ ಒಟ್ಟಿಗೆ ಸೇರದೆ ಉಕ್ರೇನ್ ವಿಚಾರದಲ್ಲಿ ಏನೂ ಆಗದು: ಟ್ರಂಪ್

ರಾಯಿಟರ್ಸ್
Published 15 ಮೇ 2025, 14:06 IST
Last Updated 15 ಮೇ 2025, 14:06 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಉಕ್ರೇನ್‌–ರಷ್ಯಾ ಸಂಘರ್ಷದ ಕುರಿತು ಮಾತನಾಡಿದ್ದಾರೆ.

ADVERTISEMENT

ತಾವು ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರು ಒಂದಾಗದಿದ್ದರೆ, ಉಕ್ರೇನ್‌ ಶಾಂತಿ ಮಾತುಕತೆ ವಿಚಾರದಲ್ಲಿ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಟ್ರಂಪ್‌, ದುಬೈನಲ್ಲಿ ಇಳಿಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. 'ಪುಟಿನ್‌ ಮತ್ತು ನಾನು ಒಟ್ಟಿಗೆ ಸೇರುವವರೆಗೂ ಏನೂ ಆಗಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ ಹಾಗೂ ರಷ್ಯಾ ನಡುವಣ ಸಂಘರ್ಷದ ಕುರಿತು ಮಾತುಕತೆ ನಡೆಸುವ ಸಂಬಂಧ ಇಂದು (ಗುರುವಾರ) ಟರ್ಕಿಯಲ್ಲಿ ಟ್ರಂಪ್‌–ಪುಟಿನ್‌ ಸಭೆ ನಿಗದಿಯಾಗಿತ್ತು. ಆದರೆ, ಪುಟಿನ್‌ ಗೈರಾಗಿದ್ದಾರೆ. ಇದರಿಂದ ಶಾಂತಿ ಮಾತುಕತೆಯ ಸಾಧ್ಯತೆ ಕ್ಷೀಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.