ADVERTISEMENT

ಅಮೆರಿಕ, ಯೂರೋಪ್‌ ಹೊರತುಪಡಿಸಿಯೂ ಜಗತ್ತು ದೊಡ್ಡದಿದೆ: ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2022, 11:27 IST
Last Updated 5 ಮಾರ್ಚ್ 2022, 11:27 IST
ಪುಟಿನ್‌ ವಿರುದ್ಧ ಇಸ್ರೇಲ್‌ನಲ್ಲಿ ನಡೆದ ಪ್ರತಿಭಟನೆ
ಪುಟಿನ್‌ ವಿರುದ್ಧ ಇಸ್ರೇಲ್‌ನಲ್ಲಿ ನಡೆದ ಪ್ರತಿಭಟನೆ   

ಮಾಸ್ಕೋ: ಉಕ್ರೇನ್‌ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳು ಡಕಾಯಿತರಂತೆ ವರ್ತಿಸುತ್ತಿವೆ ಎಂದು ರಷ್ಯಾ ಆರೋಪಿಸಿದೆ. ಈ ಕುರಿತುಸುದ್ದಿಸಂಸ್ಥೆ ‘ರಾಯಟರ್ಸ್‌’ ವರದಿ ಮಾಡಿದೆ.

ಉಕ್ರೇನ್‌ ಆಕ್ರಮಣದ ಬಗ್ಗೆ ಹೇಳಿಕೆನೀಡಿರುವ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್‌, ‘ಪಾಶ್ಚಿಮಾತ್ಯ ದೇಶಗಳು ರಷ್ಯಾದ ಜೊತೆ ಡಕಾಯಿತರ ರೀತಿಯಲ್ಲಿ ವರ್ತಿಸುತ್ತಿವೆ. ಇದಕ್ಕೆ ಮಾಸ್ಕೋ ಪ್ರತಿಕ್ರಿಯಿಸಲಿದೆ. ಈ ಪ್ರತಿಕ್ರಿಯೆಯು ರಷ್ಯಾದ ಹಿತಾಸಕ್ತಿಗಳ ಪರವಾಗಿ ಇರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಯುರೋಪ್ ಮತ್ತು ಅಮೆರಿಕಗಳನ್ನು ಹೊರತುಪಡಿಸಿಯೂ ಜಗತ್ತು ತುಂಬಾ ದೊಡ್ಡದಿದೆ. ನಮ್ಮನ್ನು ಈ ಜಗತ್ತಿನಿಂದ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ. ಕಾರಣ, ಜಗತ್ತಿನಲ್ಲಿ ಹಲವಾರು ದೇಶಗಳು ರಷ್ಯಾದಷ್ಟೇ ದೊಡ್ಡದಾಗಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ.

ಯೂರೋಪ್‌ನ ಪ್ರತಿಷ್ಠಿತ ರಾಷ್ಟ್ರಗಳು ಮತ್ತು ಅಮೆರಿಕಾ ರಷ್ಯಾದ ನಡೆಯನ್ನು ಖಂಡಿಸಿವೆ. ಉಕ್ರೇನ್‌ ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.