
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ
ಫ್ಲಾರಿಡಾ: ಉಕ್ರೇನ್‌ನಲ್ಲಿ ಶಾಂತಿ ನೆಲಸಲು, ಉಕ್ರೇನ್–ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಿಟ್ಟಿನಲ್ಲಿ ಮತ್ತಷ್ಟು ಮಾತುಕತೆ ಅಗತ್ಯವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.
ಫ್ಲಾರಿಡಾದಲ್ಲಿ ಉಕ್ರೇನ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಷ್ಯಾದ ಅಧಿಕಾರಿಗಳ ಜತೆಗೂ ನಾವು ಸಂಪರ್ಕದಲ್ಲಿದ್ದೇವೆ. ವಿವಿಧ ಹಂತಗಳಲ್ಲಿ ರಷ್ಯಾದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ. ಅವರ ನಿರ್ಧಾರಗಳ ಬಗ್ಗೆ ನಮಗೆ ತಿಳುವಳಿಕೆ ಇದೆ ಎಂದು ರುಬಿಯೊ ಹೇಳಿದ್ದಾರೆ.
ಎರಡು ದೇಶಗಳ ನಡುವೆ ಬಹಳಷ್ಟು ಮಾತುಕತೆ ಬಾಕಿ ಇದೆ. ಈ ವಾರದಲ್ಲಿ ಮಾಸ್ಕೊಗೆ ಭೇಟಿ ನೀಡಲಿದ್ದೇವೆ. ಈ ವೇಳೆ ರಷ್ಯಾ–ಉಕ್ರೇನ್ ಯುದ್ಧದ ಬಗ್ಗೆ ಉತ್ತಮ ಚರ್ಚೆ ನಡೆಸುವ ವಿಶ್ವಾಸವಿದೆ ಎಂದು ರುಬಿಯೊ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.