ಕ್ಷಿಪಣಿ ದಾಳಿ–ಮೃತದೇಹ ಸಾಗಿಸುತ್ತಿರುವ ಸಿಬ್ಬಂದಿ
(ಚಿತ್ರ ಕೃಪೆ–ರಾಯಿಟರ್ಸ್)
ಕೀವ್: ಪೂರ್ವ ಉಕ್ರೇನ್ ನಗರ ಪೊಕ್ರೊವ್‌ಸ್ಕ್ ಹಾಗೂ ಸುತ್ತಮುತ್ತ ಶನಿವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ 11 ಜನರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಸೇರಿದ್ದಾರೆ ಎಂದು ಉಕ್ರೇನ್ ನಿಯಂತ್ರಿತ ಡೊನೆಟ್‌ಸ್ಕ್ ಪ್ರದೇಶದ ಗವರ್ನರ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಉಕ್ರೇನ್‌ನಲ್ಲಿರುವ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿವೆ. ದಾಳಿ ನಂತರದ ದೃಶ್ಯಗಳನ್ನು ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಶನಿವಾರ ಮಧ್ಯಾಹ್ನ 3ಗಂಟೆಗೆ ರಷ್ಯಾದ ಪಡೆಗಳು ಎಸ್ -300 ಕ್ಷಿಪಣಿಗಳೊಂದಿಗೆ ಪೊಕ್ರೊವ್‌ಸ್ಕ್ ಮೇಲೆ ಸಾಮೂಹಿಕ ಶೆಲ್ ದಾಳಿ ನಡೆಸಿವೆ. ದಾಳಿಯಲ್ಲಿ 3ರಿಂದ 17 ವರ್ಷ ವಯಸ್ಸಿನ ಐದು ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ ಎಂದು ಗವರ್ನರ್ ಫಿಲಾಶ್ಕಿನ್ ಖಚಿತ ಪಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.