ಸಾವು
ಪ್ರಾತಿನಿಧಿಕ ಚಿತ್ರ
ಕೀವ್: ಉಕ್ರೇನ್‌ನ ಖಾರ್ಕಿವ್ ನಗರದ ಮೇಲೆ ಗುರುವಾರ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಏಳು ಜನ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಸೇನಾ ಪಡೆಗಳು ರಷ್ಯಾ ದಾಳಿಯನ್ನು ತಡೆಯಲು ಶ್ರಮಿಸುತ್ತಿವೆ.
ಖಾರ್ಕಿವ್ ಮೇಲೆ ರಷ್ಯಾ ನಡೆಸಿದ ಎಸ್–300 ಕ್ಷಿಪಣಿ ದಾಳಿಯಲ್ಲಿ 16 ಜನರು ಗಾಯಗೊಂಡಿದ್ದಾರೆ. ನಗರದ ಸುತ್ತಲೂ ಸುಮಾರು 15 ಸ್ಫೋಟಗಳು ಸಂಭವಿಸಿವೆ ಎಂದು ಪ್ರಾದೇಶಿಕ ಗವರ್ನರ್ ಓಲೆಹ್ ಸಿನಿಹುಬೊವ್ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ದಾಳಿಯನ್ನು ‘ಅತ್ಯಂತ ಕ್ರೂರ’ ಎಂದು ಕರೆದಿದ್ದಾರೆ. ಅಲ್ಲದೇ 2 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ದಾಳಿಯನ್ನು ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಹೆಚ್ಚಿನ ನೆರವನ್ನು ಪಡೆಯದಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.