ADVERTISEMENT

ರಷ್ಯಾ ಪಡೆಗಳಿಂದ ಉಕ್ರೇನ್‌ನ ಮತ್ತೊಬ್ಬ ಮೇಯರ್‌ ಅಪಹರಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 11:34 IST
Last Updated 13 ಮಾರ್ಚ್ 2022, 11:34 IST
ಯುಗ್ಗಿನ್‌ ಮತ್‌ವೀವ್‌
ಯುಗ್ಗಿನ್‌ ಮತ್‌ವೀವ್‌   

ಉಕ್ರೇನ್‌:ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಬಾಂಬ್‌, ಕ್ಷಿಪಣಿ ಹಾಗೂ ಶೆಲ್‌ ದಾಳಿ ತೀವ್ರಗೊಳಿಸಿರುವ ರಷ್ಯಾ ಪಡೆಗಳು ಭಾನುವಾರ ಉಕ್ರೇನ್‌ನ ಮತ್ತೊಬ್ಬ ಪ್ರಮುಖ ಮೇಯರ್‌ ಒಬ್ಬರನ್ನು ಅಪಹರಿಸಿದ್ದಾರೆ.

ನಿಪ್ರೊರುದ್ನೆ ನಗರದ ಮೇಯರ್‌ ಯುಗ್ಗಿನ್‌ಮತ್‌ವೀವ್‌ ಎಂಬುವವರನ್ನು ಝಪೊರಿಝಿಯಾದಿಂದ ರಷ್ಯಾ ಆಕ್ರಮಣಕಾರರು ಅಪಹರಿಸಿದ್ದಾರೆ ಎಂದುಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಡಿಮಿಟ್ರೊ ಕುಲೆಬಾ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ರಷ್ಯಾದ ಆಕ್ರಮಣಕಾರರು ಭಾನುವಾರ ಕೂಡ ಮತ್ತೊಬ್ಬ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಉಕ್ರೇನ್‌ನನಿಪ್ರೊರುದ್ನೆ ನಗರದ ಮೇಯರ್‌ ಯುಗ್ಗಿನ್‌ ಮತ್‌ವೀವ್‌ ಅವರನ್ನು ಅಪಹರಿಸಿದ್ದಾರೆ. ಸ್ಥಳೀಯ ನಾಗರಿಕರು ತಿರುಗಿಬಿದ್ದಿರುವುದಕ್ಕೆ ರಷ್ಯಾ ಸೈನಿಕರು ಇಂತಹ ಭಯೋತ್ಪಾದನೆಯ ಹಾದಿ ಹಿಡಿದಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವದ ವಿರುದ್ಧ ರಷ್ಯಾ ನಡೆಸುತ್ತಿರುವ ಭಯೋತ್ಪಾದನೆ ನಿಲ್ಲಿಸಲು ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು ಎಂದುಝಪ್ರೊರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥಒಲೆಕ್ಸಾಂಡರ್ ಸ್ಟಾರುಖ್ ಮನವಿ ಮಾಡಿದ್ದಾರೆ.

ADVERTISEMENT

ಶನಿವಾರವಷ್ಟೇಮೆಲಿಟೊಪೊಲ್‌ ನಗರದ ಮೇಯರ್‌ ಇವಾನ್‌ ಪೆಡೊರೊವ್‌ ಅವರನ್ನು ರಷ್ಯಾ ಪಡೆಗಳು ಅಪಹರಿಸಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದರು.ಪೆಡೊರೊವ್‌ ಅವರನ್ನು ಸುರಕ್ಷಿತ ಬಿಡುಗಡೆ ಮಾಡಿಸಲು ನೆರವು ನೀಡುವಂತೆಜರ್ಮನಿ, ಫ್ರಾನ್ಸ್‌ ಹಾಗೂ ಇಸ್ರೇಲ್‌ ದೇಶಗಳಿಗೆ ನೆರವು ನೀಡುವಂತೆ ಝೆಲೆನ್‌ಸ್ಕಿ ನೆರವು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.