ADVERTISEMENT

ಅಮೆರಿಕ –ಮೆಕ್ಸಿಕೊ ಗಡಿಯಲ್ಲಿ ಬಿಸಿಲ ತಾಪಕ್ಕೆ ಭಾರತದ ಬಾಲಕಿ ಬಲಿ

ಪಿಟಿಐ
Published 15 ಜೂನ್ 2019, 17:01 IST
Last Updated 15 ಜೂನ್ 2019, 17:01 IST
   

ಹ್ಯೂಸ್ಟನ್: ಅಮೆರಿಕ– ಮೆಕ್ಸಿಕೊ ಗಡಿಯ ಮರುಭೂಮಿ ಪ್ರದೇಶದಲ್ಲಿ ಭಾರತದ ಬಾಲಕಿಯೊಬ್ಬಳು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುಪ್ರೀತ್‌ ಕೌರ್‌ (6) ಮೃತ ಬಾಲಕಿ. ತಾಯಿ ನೀರು ಅರಸಿ ಹೋಗಿದ್ದ ವೇಳೆ ಈಕೆ ಬಿಸಿಲಿನ ತಾಪ ತಾಳಲಾರದೆ ಅಸುನೀಗಿದ್ದಾಳೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು ಎಂದಿದ್ದಾರೆ. ಅರಿಜೋನಾದ ಲ್ಯೂಕೆವಿಲ್ಲೆಯಿಂದ 27 ಕಿ.ಮೀ. ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು ಎಂದು ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಸಿಬ್ಬಂದಿ ತಿಳಿಸಿದ್ದಾರೆ. ಬಾಲಕಿಯ ಸಾವಿಗೆ ಮಾನವ ಕಳ್ಳಸಾಗಣೆದಾರರೇ ಹೊಣೆ ಎಂದೂ ಹೇಳಿದ್ದಾರೆ.‌

ADVERTISEMENT

ಅಮೆರಿಕಕ್ಕೆ ವಲಸೆ ಹೋಗುತ್ತಿದ್ದ ತಂಡದ ನಾಲ್ವರ ಜೊತೆ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಮಾನವ ಕಳ್ಳಸಾಗಣೆ
ದಾರರು ಈ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.

ಮಹಿಳೆ ಹಾಗೂ ಇಬ್ಬರು ಮಕ್ಕಳು ಮರುಭೂಮಿ ಪ್ರದೇಶದಲ್ಲಿ ನಾಪತ್ತೆ ಆಗಿರುವುದಾಗಿ ಸಿಬಿಪಿ ಅಧಿಕಾರಿಗಳಿಗೆ ಭಾರತ ಮೂಲದ ಇಬ್ಬರು ಮಹಿಳೆಯರು ತಿಳಿಸಿದ್ದರು. ಅಮೆರಿಕ ಪ್ರವೇಶಿಸಿದ್ದ ಈ ಮಹಿಳೆಯರನ್ನು ಸಿಬಿಪಿ ವಶಕ್ಕೆ ಪಡೆದುಕೊಂಡಿತ್ತು. ಅನಂತರ ಸಿಬಿಪಿ ಸಿಬ್ಬಂದಿ ಗಡಿಯ ಬಳಿ ಹೆಲಿಕಾಪ್ಟರ್‌ ಮೂಲಕ ಶೋಧ ಕಾರ್ಯ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.