ADVERTISEMENT

ಚುನಾವಣೆಯಲ್ಲಿ ಅಕ್ರಮ: ಟ್ರಂಪ್ ಆರೋಪ ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರು

ಏಜೆನ್ಸೀಸ್
Published 17 ಡಿಸೆಂಬರ್ 2020, 6:12 IST
Last Updated 17 ಡಿಸೆಂಬರ್ 2020, 6:12 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಎರಡು ದಿನಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಎಲೆಕ್ಟ್ರೋಲ್ ಕಾಲೇಜ್‌ ಅಧಿಕೃತವಾಗಿ ಘೋಷಿಸಿದ ನಂತರವೂ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳು ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ಮತ್ತಷ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಟ್ರಂಪ್ ಮಾಡಿರುವ ಆರೋಪದ ಬಗ್ಗೆ ಸೆನೆಟ್ ಹ್ಯೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಸರ್ಕಾರಿ ವ್ಯವಹಾರಗಳ ಸಮಿತಿ ವಿಚಾರಣೆ ಮುಂದುವರಿಸಿದೆ. ಈ ವಿಚಾರಣೆಯ ವೇಳೆ ರಿಪಬ್ಲಿಕನ್‌ ಸೆನೆಟರ್‌ಗಳು ತೀವ್ರವಾಗಿ ಗಲಾಟೆ ಮಾಡಿದರು. ಇದೇ ವೇಳೆ ಈ ಆರೋಪಗಳು ಆಧಾರ ರಹಿತವಾಗಿವೆ ಎಂದು ಡೆಮಾಕ್ರಟ್ ಪಕ್ಷದವರು ಪ್ರತಿಯಾಗಿ ಟೀಕಿಸಿದರು.

ಡೊನಾಲ್ಡ್ ಟ್ರಂಪ್ ಅವರ ಈ ಆರೋಪ ಕುರಿತು ಸೆನೆಟ್ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಮತ್ತು ಸರ್ಕಾರಿ ವ್ಯವಹಾರಗಳ ಸಮಿತಿಯು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಬುಧವಾರ ಕೂಡ ವಿಚಾರಣೆ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.