ADVERTISEMENT

ಗಾಜಾ ಪರಿಹಾರ: 7 ಬಿಲಿಯನ್‌ ಡಾಲರ್‌ ನೆರವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:12 IST
Last Updated 20 ಫೆಬ್ರುವರಿ 2026, 0:12 IST
<div class="paragraphs"><p>ಯುದ್ಧಪೀಡಿತ ಗಾಜಾ ಪಟ್ಟಿ</p></div>

ಯುದ್ಧಪೀಡಿತ ಗಾಜಾ ಪಟ್ಟಿ

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್‌: ಯುದ್ಧಪೀಡಿತ ಗಾಜಾದಲ್ಲಿನ ಪರಿಹಾರ ಕಾರ್ಯಾಚರಣೆಗಳಿಗಾಗಿ ಶಾಂತಿ ಮಂಡಳಿಯ ಒಂಬತ್ತು ಸದಸ್ಯ ರಾಷ್ಟ್ರಗಳು 7 ಬಿಲಿಯನ್ ಡಾಲರ್‌ (₹63 ಸಾವಿರ ಕೋಟಿ) ನೀಡಲು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ. 

ADVERTISEMENT

ಗಾಜಾ ಪುನರ್ ನಿರ್ಮಾಣಕ್ಕಾಗಿ ರಚಿಸಿರುವ ಶಾಂತಿ ಮಂಡಳಿಯ ಉದ್ಘಾಟನಾ ಸಭೆಯಲ್ಲಿ ಟ್ರಂಪ್‌ ಅವರು ಈ ಘೋಷಣೆ ಮಾಡಿದ್ದಾರೆ.  

‘ಕಜಕಸ್ತಾನ, ಅಜರ್‌ಬೈಜಾನ್, ಯುಎಇ, ಮೊರೊಕೊ, ಬಹರೇನ್‌, ಕತಾರ್‌, ಸೌದಿ ಅರೇಬಿಯಾ, ಉಜ್ಬೇಕಿಸ್ತಾನ ಹಾಗೂ ಕುವೈತ್‌ ರಾಷ್ಟ್ರಗಳು ಈ ಅನುದಾನ ನೀಡಲು ಒಪ್ಪಿಕೊಂಡಿವೆ. ಪ್ರತಿಯೊಂದು ಡಾಲರ್‌ ಕೂಡ ಸ್ಥಿರತೆ ಹಾಗೂ ಹೊಸ ಪ್ರಾಂತ್ಯದ ಸ್ಥಾಪನೆಯ ಭರವಸೆಯ ಮೇಲೆ ಮಾಡುತ್ತಿರುವ ಹೂಡಿಕೆಯಾಗಿದ್ದು, ದಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ’ ಎಂದೂ ಟ್ರಂಪ್‌ ಹೇಳಿದ್ದಾರೆ.

ಅಮೆರಿಕ ಕೂಡ ಮಂಡಳಿಗೆ 10 ಬಿಲಿಯನ್‌ ಡಾಲರ್‌ (₹91 ಸಾವಿರ ಕೋಟಿ) ನೀಡುವ ಬದ್ಧತೆ ಘೋಷಿಸಿದೆ ಎಂದೂ ಟ್ರಂಪ್‌ ಹೇಳಿದ್ದಾರೆ. ಆದರೆ, ಯಾವ ಉದ್ದೇಶಕ್ಕೆ ಆ ಹಣವನ್ನು ಬಳಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.