ADVERTISEMENT

ಈಜಿಪ್ಟ್: ಚರ್ಚ್‌ನಲ್ಲಿ ಅಗ್ನಿ ಅವಘಡ; ಕನಿಷ್ಠ 41 ಮಂದಿ ಸಾವು

ರಾಯಿಟರ್ಸ್
Published 14 ಆಗಸ್ಟ್ 2022, 11:35 IST
Last Updated 14 ಆಗಸ್ಟ್ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈರೊ: ಈಜಿಪ್ಟ್‌ನ ಗಿಜಾ ನಗರದ ಚರ್ಚ್‌ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 41ಮಂದಿ ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಘಟನೆಯಲ್ಲಿ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಂಬಾಬಾ ನೆರೆಹೊರೆಯಲ್ಲಿರುವ ಅಬು ಸಫೈನ್‌ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ 5,000ದಷ್ಟು ಜನರು ಸೇರಿದ್ದರು.

ಈ ವೇಳೆ ಬೆಂಕಿ ಅವಘಡ ಉಂಟಾಗಿದೆ. ಇದು ಕಾಲ್ತುಳಿತಕ್ಕೂ ಕಾರಣವಾಯಿತು.

ಬೆಂಕಿ ಹತ್ತಿಕೊಳ್ಳಲು ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಕಾಪ್ಟಿಕ್‌ ಕ್ಯಾಥೊಲಿಕ್‌ ಚರ್ಚ್‌ ಹೇಳಿದೆ.

ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಈಜಿಪ್ಟ್‌ನಲ್ಲಿ ಕಾಪ್ಟಿಕ್‌ ಕ್ರೈಸ್ತರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ 10ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.