ADVERTISEMENT

ಶಾಂಘೈ ಶೃಂಗಸಭೆ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಜಿನ್‌ಪಿಂಗ್

ಪಿಟಿಐ
Published 31 ಆಗಸ್ಟ್ 2025, 6:04 IST
Last Updated 31 ಆಗಸ್ಟ್ 2025, 6:04 IST
   

ತಿಯಾನ್‌ಜಿನ್‌: ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಗೂ ಮುನ್ನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ 50 ರಷ್ಟು ಸುಂಕ ವಿಧಿಸಿರುವ ನಡುವೆಯೇ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

‘ಕಳೆದ ವರ್ಷ ಕಜಾನ್‌ನಲ್ಲಿ ನಡೆದ ಭೇಟಿಯ ನಂತರ ಭಾರತ-ಚೀನಾ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ. ಗಡಿಯಲ್ಲಿ ಸೈನಿಕರನ್ನು ವಾಪಸ್ ಕರೆಸಿಕೊಂಡಿರುವುದರಿಂದ ಶಾಂತಿ ಮತ್ತು ಸ್ಥಿರತೆಯ ವಾತಾವರಣ ಸೃಷ್ಟಿಯಾಗಿದೆ’ ಎಂದು ಮೋದಿ ಹೇಳಿದರು.

ADVERTISEMENT

‘ಚೀನಾ ಮತ್ತು ಭಾರತ ಪೂರ್ವದ ಎರಡು ಪ್ರಾಚೀನ ನಾಗರಿಕತೆಗಳಾಗಿವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಹೌದು. ಉಭಯ ದೇಶಗಳ ಜನರ ಜೀವನವನ್ನು ಸುಧಾರಿಸಲು, ಅಭಿವೃದ್ಧಿಶೀಲ ರಾಷ್ಟ್ರಗಳ ಒಗ್ಗಟ್ಟನ್ನು ಉತ್ತೇಜಿಸಲು ಮತ್ತು ಮಾನವ ಸಮಾಜದ ಪ್ರಗತಿಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಜಿನ್‌ಪಿಂಗ್ ಹೇಳಿದರು.

ಮುಂದುವರಿದು, ‘ಡ್ಯ್ಯಾಗನ್‌ ಮತ್ತು ಆನೆ ಒಟ್ಟಿಗೆ ಸೇರುವುದು ಉತ್ತಮ ಬೆಳವಣಿಗೆ’ ಎಂದರು.

ಏಳು ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆ ಭೇಟಿ ನಂತರ ಸುಮಾರು 10 ತಿಂಗಳ ನಂತರ ಮೋದಿ–ಜಿನ್‌ಪಿಂಗ್ ಮುಖಾಮುಖಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.