ಕೇಬಲ್ ಕಾರು (ಪ್ರಾತಿನಿಧಿಕ ಚಿತ್ರ)
ಚಿತ್ರ ಕೃಪೆ: ಎಕ್ಸ್
ಕೊಲಂಬೊ: ಕೇಬಲ್ ಚಾಲಿತ ಕಾರು ಪಲ್ಟಿಯಾಗಿ ಭಾರತೀಯ ಸೇರಿ ಏಳು ಮಂದಿ ಬೌದ್ಧ ಸನ್ಯಾಸಿಗಳು ಮೃತಪಟ್ಟ ಘಟನೆ ವಾಯವ್ಯ ಶ್ರೀಲಂಕಾದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕೊಲಂಬೊದಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ನಿಕಾವೆರಟಿಯಾದಲ್ಲಿರುವ ಪ್ರಸಿದ್ಧ ಬೌದ್ಧ ಮಠವಾದ ‘ನಾ ಉಯನ ಅರಣ್ಯ ಸೇನಾಸನಯ’ದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದೆ. ಈ ಮಠವು ಧ್ಯಾನ ಕೇಂದ್ರಗಳಿಗೆ ಹೆಸರುವಾಸಿಯಾಗಿದ್ದು, ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳ ಸಾಧಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಆರಂಭಿಕ ವರದಿಗಳ ಪ್ರಕಾರ ಕೇಬಲ್ ತುಂಡಾಗಿ, ಅತಿ ವೇಗದಲ್ಲಿ ಕೆಳಮುಖವಾಗಿ ಚಲಿಸುತ್ತಿದ್ದ ಕಾರು ಬೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮೃತರಲ್ಲಿ ಭಾರತ, ರಷ್ಯಾ ಮತ್ತು ರೊಮೇನಿಯಾದ ತಲಾ ಒಬ್ಬರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.