ಕೊಲೊಂಬೊದ ನ್ಯಾಯಾಲಯದ ಬಳಿ ರಜಿತ ಸೇನಾರತ್ನ ಅವರನ್ನು ಪೊಲೀಸರು ಬಂಧಿಸಿದರು
ಎಎಫ್‌ಪಿ ಚಿತ್ರ
ಕೊಲಂಬೊ: ಭ್ರಷ್ಟಾಚಾರ ಆರೋಪದಡಿ ಶ್ರೀಲಂಕಾದ ಮಾಜಿ ಸಚಿವ ರಜಿತ ಸೇನಾರತ್ನ ಹಾಗೂ ಮಾಜಿ ಸಂಸದರೂ ಆದ ಬೌದ್ಧ ಸನ್ಯಾಸಿ ಅತುರಲಿಯೇ ರಥನ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ಈ ಇಬ್ಬರು ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೇನಾರತ್ನ ಅವರನ್ನು ಸೆಪ್ಟೆಂಬರ್ 9ರವರೆಗೆ ಹಾಗೂ ಸಬ್‌ಅರ್ಬನ್ ನುಗೆಗೊಂಡ ನ್ಯಾಯಾಲಯ ರಥನ ಅವರನ್ನು ಸೆ.12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿವೆ.
2013ರಲ್ಲಿ ಸೇನಾರತ್ನ ಅವರು ಮೀನುಗಾರಿಕೆ ಸಚಿವರಾಗಿದ್ದಾಗ ಕೊರಿಯಾದ ಕಂಪನಿಯೊಂದಕ್ಕೆ ಮರಳು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದರು ಎಂಬ ಆರೋಪವಿದೆ. ಬೌದ್ಧ ಸನ್ಯಾಸಿಯ ಅಪಹರಣ ಪ್ರಕರಣ ಸಂಬಂಧ ರಥನ ಅವರನ್ನು ಬಂಧಿಸಲಾಗಿದೆ.
ಭ್ರಷ್ಟಾಚಾರ ಆರೋಪದಡಿ ಬಂಧನದಲ್ಲಿದ್ದ ಶ್ರೀಲಂಕಾದ ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರಿಗೆ ಇತ್ತೀಚೆಗೆ ಜಾಮೀನು ದೊರೆತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.