ADVERTISEMENT

ಆರ್ಥಿಕ ಸಂಕಷ್ಟದ ನಡುವೆ ಶ್ರೀಲಂಕಾಕ್ಕೆ ಡೆಂಗಿ ಕಾಟ!

ಐಎಎನ್ಎಸ್
Published 22 ಆಗಸ್ಟ್ 2022, 9:41 IST
Last Updated 22 ಆಗಸ್ಟ್ 2022, 9:41 IST
ಡೆಂಗಿಕಾರಕ ಸೊಳ್ಳೆ
ಡೆಂಗಿಕಾರಕ ಸೊಳ್ಳೆ    

ಕೊಲಂಬೊ: ಈ ವರ್ಷದ ಆಗಸ್ಟ್‌ ವರೆಗೆ ಶ್ರೀಲಂಕಾದಲ್ಲಿ ಸುಮಾರು 50,000 ಡೆಂಗಿ ಪ್ರಕರಣಗಳು ವರದಿಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಕಳೆದ ಎಂಟು ತಿಂಗಳಲ್ಲಿ 49,941 ಜನರು ಡೆಂಗಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ರಾಷ್ಟ್ರೀಯ ಡೆಂಗಿ ನಿಯಂತ್ರಣ ಘಟಕ (ಎನ್‌ಡಿಸಿಯು) ಹೇಳಿದೆ.

ಕೊಲಂಬೊ, ಗಂಪಹಾ ಮತ್ತು ಕಲುತಾರಾ ಜಿಲ್ಲೆಗಳಿರುವ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದಲ್ಲೇ ಅರ್ಧದಷ್ಟು ಪ್ರಕರಣಗಳು ವರದಿಯಾಗಿವೆ ಎಂದು ‘ಎನ್‌ಡಿಸಿಯು’ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ADVERTISEMENT

ಕೊಲಂಬೊದಲ್ಲಿ 12,754, ಗಂಪಹಾದಲ್ಲಿ 7,496 ಮತ್ತು ಕಲುತರದಲ್ಲಿ 4,731 ಪ್ರಕರಣಗಳು ವರದಿಯಾಗಿವೆ ಎಂದು ಕೊಲಂಬೊ ಮುನ್ಸಿಪಲ್ ಕೌನ್ಸಿಲ್ (ಸಿಎಂಸಿ) ಮುಖ್ಯ ವೈದ್ಯಕೀಯ ಅಧಿಕಾರಿ ರುವಾನ್ ವಿಜೆಮುನಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಡೆಂಗಿ ಸೊಳ್ಳೆಗಳನ್ನು ನಿಯಂತ್ರಿಸಲು ಬಳಸುವ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಖರೀದಿಸಲು ಸಿಎಂಸಿಗೆ ಹಣದ ಕೊರತೆ ಎದುರಾಗಿದೆ. ಹೀಗಾಗಿ ‘ವಾರ್ಷಿಕ ಸೊಳ್ಳೆ ನಿಯಂತ್ರಣ ಕಾರ್ಯಕ್ರಮ’ವು ಸಮಸ್ಯೆ ಎದುರಿಸುತ್ತಿದೆ ಎಂದು ವಿಜೆಮುನಿ ಹೇಳಿದರು.

ಜೂನ್ ಮತ್ತು ಆಗಸ್ಟ್ ನಡುವೆ ಮತ್ತು ನವೆಂಬರ್ ಮತ್ತು ಜನವರಿ ನಡುವಿನ ಅವಧಿಯಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿವೆ ಎಂದು ವಿಜೆಮುನಿ ತಿಳಿಸಿದ್ದಾರೆ.

ಇಂಧನ ಕೊರತೆಯೂ ಸೊಳ್ಳೆ ನಿರ್ಮೂಲನಾ ಅಭಿಯಾನಕ್ಕೆ ಅಡ್ಡಿಯಾಗಿದೆ ಎಂದರು.

ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದು ಅಧ್ಯಕ್ಷ, ಪ್ರಧಾನಿ ಹುದ್ದೆಗಳಿಂದ ಗೊಟಬಯ ಸೋದರರು ಕೆಳಗಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.