ADVERTISEMENT

ಕಮಲಾ ಹ್ಯಾರಿಸ್ ಹೆಸರು ತಪ್ಪು ಉಚ್ಚಾರಣೆ ವಿರುದ್ಧ ಆಂದೋಲನ

ಮೈ ನೇಮ್ ಇಸ್, ಐ ಸ್ಟ್ರ್ಯಾಂಡ್ ವಿತ್ ಕಮಲಾ ಹೆಸರಿಡಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 19:36 IST
Last Updated 18 ಅಕ್ಟೋಬರ್ 2020, 19:36 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ರಿಪಬ್ಲಿಕನ್ ಪಕ್ಷದ ಸಂಸದ ಡೇವಿಡ್ ಪರ್ಡ್ಯೂ ತಪ್ಪಾಗಿ ಉಚ್ಚರಿಸಿದ್ದು ಕಮಲಾ ಬೆಂಬಲಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕಮಲಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ #MyNameIs ಹಾಗೂ #IstandwithKamala ಹ್ಯಾಷ್‌ಟ್ಯಾಗ್‌ಗಳೊಂದಿಗೆ ಅಭಿಯಾನ ಆರಂಭಿಸಲಾಗಿದೆ.

ಜಾರ್ಜಿಯಾದ ಮ್ಯಾಕಾನ್ ನಗರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ‍್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಡೇವಿಡ್ ಅವರು, ‘ಕಾಹ್–ಮಾಹ್–ಲಾಹ್? ಕಮಲಾ–ಮಲಾ–ಮಲಾ? ನನಗೆ ಗೊತ್ತಿಲ್ಲ. ಏನೋ ಒಂದು’ ಎಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಹೇಳಿದ್ದರು.

‘ನೀವು ಡೇವಿಡ್ ಪರ್ಡ್ಯೂ ಅವರ ಹೆಸರನ್ನು ಉಚ್ಚರಿಸಬಲ್ಲವರಾದರೆ ಭಾವಿ ಉಪಾಧ್ಯಕ್ಷೆ ಕಮಲಾ ಅವರ ಹೆಸರನ್ನೂ ಉಚ್ಚರಿಸಬಲ್ಲಿರಿ’ ಎಂದು ಕಮಲಾ ಅವರ ವಕ್ತಾರರಾದ ಸಬ್ರಿನಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಅನೇಕರು ತಮ್ಮ ಹೆಸರಿನ ಅರ್ಥಗಳನ್ನು ಟ್ವೀಟ್ ಮಾಡುವ ಮೂಲಕ ಡೇವಿಡ್‌ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌ನ ಮಾಜಿ ಅಟಾರ್ನಿ ಜನರಲ್ ಪ್ರೀತ್ ಭರಾರ ಅವರು, ‘ನನ್ನ ಹೆಸರು ಪ್ರೀತ್. ಅಂದರೆ ಪ್ರೀತಿ ಎಂದರ್ಥ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರೀತ್ ಅವರಂತೆಯೇ ಅನೇಕರು ತಮ್ಮ ಹೆಸರುಗಳ ಅರ್ಥದ ಬಗ್ಗೆ ಸರಣಿಯೋಪಾದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರಿಂದ ಜಾರ್ಜಿಯಾದಿಂದ ಮರುಆಯ್ಕೆ ಬಯಸುತ್ತಿರುವ ಡೇವಿಡ್‌ಗೆ ಹಿನ್ನಡೆಯಾಗಿದೆ ಎಂದು ‘ಬಜ್‌ಫೀಡ್’ ಮಾಧ್ಯಮ ಶನಿವಾರ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.