ADVERTISEMENT

ತಾಂತ್ರಿಕ ದೋಷ: ವಾಷಿಂಗ್ಟನ್‌ಗೆ ಮರಳಿದ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನ

ಪಿಟಿಐ
Published 21 ಜನವರಿ 2026, 6:44 IST
Last Updated 21 ಜನವರಿ 2026, 6:44 IST
<div class="paragraphs"><p>ಏರ್ ಫೋರ್ಸ್ ಒನ್</p></div>

ಏರ್ ಫೋರ್ಸ್ ಒನ್

   

ವಾಷಿಂಗ್ಟನ್: ದಾವೋಸ್‌ಗೆ ತೆರಳುತ್ತಿದ್ದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ಗೆ ಹಿಂದಿಗಿರುವ ಘಟನೆ ವರದಿಯಾಗಿದೆ.

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಟ್ರಂಪ್ ಪ್ರಯಾಣ ಬೆಳೆಸಿದ್ದರು.

ADVERTISEMENT

ಆದರೆ ಏರ್ ಫೋರ್ಸ್ ವಿಮಾನದ ಎಲೆಕ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ ಮಿಲಿಟರಿ ನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಇಳಿಸಲಾಯಿತು.

ಟ್ರಂಪ್ ಅವರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್ ತಿಳಿಸಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳನ್ನು ಟ್ರಂಪ್ ಭೇಟಿಯಾಗಲಿದ್ದಾರೆ.

ಈ ಮೊದಲು ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆದುಕೊಳ್ಳುವ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಲವಂತವಾದರೂ ಸರಿ ಆ ದೇಶವನ್ನು ಪಡೆದುಕೊಳ್ಳುವುದನ್ನು ನಿರಾಕರಿಸಲಾಗದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಟ್ರಂಪ್ ದಾವೋಸ್ ಪ್ರಯಾಣ ಬೆಳೆಸಿದ್ದಾರೆ.

ಗುರುವಾರದಂದು ಶಾಂತಿ ಮಂಡಳಿ (ಬೋರ್ಡ್ ಆಫ್‌ ಪೀಸ್‌) ಕಾರ್ಯಕ್ರಮದಲ್ಲೂ ಟ್ರಂಪ್ ಭಾಗವಹಿಸಲಿದ್ದು, ಗಾಂಜಾ ಶಾಂತಿ ಯೋಜನೆ ಅನುಮೋದಿಸುವ ನಿರ್ಣಯಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.