ADVERTISEMENT

ಅಫ್ಗಾನಿಸ್ತಾನ | ಉಗ್ರರಿಂದ 6 ಪೊಲೀಸರ ಹತ್ಯೆ

ಏಜೆನ್ಸೀಸ್
Published 11 ಆಗಸ್ಟ್ 2020, 15:52 IST
Last Updated 11 ಆಗಸ್ಟ್ 2020, 15:52 IST
   

ಕಾಬೂಲ್: ಅಫ್ಗಾನಿಸ್ತಾನದ ನಂಗಾರ್ಹರ್‌ ಪ್ರಾಂತ್ಯದಲ್ಲಿ ಕಾನೂನು ಜಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿ ಉಗ್ರರು ನಡೆಸಿದ ದಾಳಿಯಿಂದಾಗಿ ಆರು ಮಂದಿ ಮೃತಪಟ್ಟಿದ್ದು, ಮತ್ತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ.

ಈ ಪ್ರಾಂತ್ಯದಲ್ಲಿರುವಪಾಚಿರ್ ವಾ ಅಗಂ ಜಿಲ್ಲೆಯ ಗೆರಾ ಖೇಲ್‌ ಪ್ರದೇಶದಲ್ಲಿರುವ ಪೊಲೀಸ್‌ ಚೆಕ್‌ಪೋಸ್ಟ್‌ ಮೇಲೆ ಉ್ರಗರು ಸೋಮವಾರ ಸಂಜೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಾಯಾಳು ಅಧಿಕಾರಿಗಳನ್ನು ನಂಗಾರ್ಹರ್‌ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರವಾಗಲೀ, ಯಾವುದೇ ಉಗ್ರ ಸಂಘಟನೆಯಾಗಲಿ ಘಟನೆ ಸಂಬಂಧ ಹೇಳಿಕೆ ನೀಡಿಲ್ಲ.

ADVERTISEMENT

ಅಫ್ಗಾನಿಸ್ತಾನದಲ್ಲಿ ಗಲಭೆ ನಿಯಂತ್ರಿಸುವ ಸಲುವಾಗಿ ತಾಲಿಬಾನ್‌ ಮತ್ತು ಅಮೆರಿಕ ನಡುವಣಫೆಬ್ರುವರಿ 29 ರಂದು ಶಾಂತಿ ಒಪ್ಪಂದ ನಡೆದಿದೆ. ಆದಾಗ್ಯೂ ದೇಶದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.