ADVERTISEMENT

ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತೇವೆ: ಟ್ರಂಪ್ ಬೆದರಿಕೆ

ಏಜೆನ್ಸೀಸ್
Published 10 ಜನವರಿ 2026, 7:40 IST
Last Updated 10 ಜನವರಿ 2026, 7:40 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ಡೆನ್ಮಾರ್ಕ್‌ ಅಧೀನದಲ್ಲಿರುವ ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ನಾವು ಗ್ರೀನ್‌ಲ್ಯಾಂಡ್‌ಗೆ ಏನೋ ಮಾಡಲು ಹೊರಟಿದ್ದೇವೆ, ಅದು ಅವರಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಸರಿ’ ಎಂದು ಟ್ರಂಪ್ ನುಡಿದಿದ್ದಾರೆ.

ADVERTISEMENT

ವೆನಿಜುವೆಲಾದ ತೈಲ ಮೀಸಲುಗಳ ಬಗ್ಗೆ ಚರ್ಚಿಸಲು ಶ್ವೇತಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ತೈಲ ಹಾಗೂ ಅನಿಲ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಒಂದು ಒಪ್ಪಂದ ಮಾಡಲು ಸಜ್ಜಾಗಿದ್ದೇನೆ. ಇದು ಸರಳ ವಿಧಾನ. ಆದರೆ ನೀವು ಸರಳ ಮಾರ್ಗದ ಮೂಲಕ ಮಾಡಲು ತಯಾರಿಲ್ಲದಿದ್ದರೆ, ಬಲವಂತವಾಗಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಆರ್ಕಿಟಿಕ್ ವಲಯದಲ್ಲಿ ಚೀನಾ ಹಾಗೂ ರಷ್ಯಾದ ಮಿಲಿಟರಿ ಚಟುವಟಿಕೆ ನಿಯಂತ್ರಣಕ್ಕೆ, ಖನಿಜ ಸಮೃದ್ಧ ದ್ವೀಪವನ್ನು ನಿಯಂತ್ರಿಸುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ

‌‘ರಷ್ಯಾ ಹಾಗೂ ಚೀನಾಗೆ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ನಾವು ಮಾಡದಿದ್ದರೆ ಅವರೇ ಅದನ್ನು ಮಾಡುತ್ತಾರೆ. ಹೀಗಾಗಿ ಗ್ರೀನ್‌ಲ್ಯಾಂಡ್ ಬಗ್ಗೆ ನಾವು ಏನೋ ಮಾಡಲು ಹೊರಟಿದ್ದೇವೆ. ಅದು ಸರಳ ಅಥವಾ ಕಠಿಣ ದಾರಿಯಲ್ಲಿ ಮಾಡುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ಆರ್ಕಿಟಿಕ್ ವಲಯದಲ್ಲಿ ಚೀನಾ ಹಾಗೂ ರಷ್ಯಾ ಇತ್ತೀಚೆಗೆ ಸೇನಾ ಚಟುವಟಿಕೆಯನ್ನು ಹೆಚ್ಚಿಸಿದ್ದರೂ, ಗ್ರೀನ್‌ಲ್ಯಾಂಡ್‌ ಮೇಲೆ ಯಾವುದೇ ಹಕ್ಕು ಸಾಧಿಸಿಲ್ಲ.

ಟ್ರಂಪ್ ಬೆದರಿಕೆ ವಿರುದ್ಧ ಡೆನ್ಮಾರ್ಕ್, ಐರೋಪ್ಯ ದೇಶಗಳು ಧ್ವನಿ ಎತ್ತಿವೆ. ‘ಗ್ರೀನ್‌ಲ್ಯಾಂಡ್ ಮೇಲಿನ ಅತಿಕ್ರಮಣವು ಎಲ್ಲದಕ್ಕೂ ಅಂತ್ಯ ಹಾಡಲಿದೆ’ ಎಂದು ಡೆನ್ಮಾರ್ಕ್ ಪ್ರಧಾನಿ ಮೇತು ಫ್ರೆಡ್ರಿಕ್ಸನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.