ADVERTISEMENT

ಟರ್ಕಿ ಭೂಕಂಪದಿಂದ 2.3 ಕೋಟಿ ಜನರ ಮೇಲೆ ಪರಿಣಾಮ ಸಾಧ್ಯತೆ : ವಿಶ್ವ ಆರೋಗ್ಯ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 11:00 IST
Last Updated 7 ಫೆಬ್ರುವರಿ 2023, 11:00 IST
   

ಜಿನೀವಾ: ಟರ್ಕಿ ಮತ್ತು ಸಿರಿಯಾದಲ್ಲಿ 5000 ಜನರ ಸಾವಿಗೆ ಕಾರಣವಾದ ಇತ್ತೀಚಿನ ಬೃಹತ್ ಭೂಕಂಪ ಸುಮಾರು 2.3 ಕೋಟಿ ಜನರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಎಒ) ಮಂಗಳವಾರ ಎಚ್ಚರಿಸಿದೆ. ಜೊತೆಗೆ ದೀರ್ಘಾವಧಿ ನೆರವಿನ ಭರವಸೆಯನ್ನೂ ಸಂಸ್ಥೆ ನೀಡಿದೆ.

‘ಘಟನೆ ಅವಲೋಕಿಸಿದರೆ ಸುಮಾರು 50 ಲಕ್ಷ ದುರ್ಬಲ ವರ್ಗವನ್ನು ಒಳಗೊಂಡಂತೆ 2.3 ಕೋಟಿ ಜನರು ಈ ವಿಪತ್ತಿನಿಂದ ತೊಂದರೆಗೊಳಗಾಗಿದ್ದರೆ ಎಂದು ತೋರಿಸುತ್ತವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ತುರ್ತು ಅಧಿಕಾರಿ ಅಡೆಲ್ಹೀಡ್ ಮಾರ್ಸ್ಚಾಂಗ್ ಹೇಳಿದರು.

‘ಭೂಕಂಪ ಪೀಡಿತ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಸಂಭಾವ್ಯ ಆರೋಗ್ಯ ಮೂಲಸೌಕರ್ಯ ಹಾನಿಗೊಂಡಿದೆ’ ಎಂದು ಅವರು ತಿಳಿಸಿದರು.

ADVERTISEMENT

ದುರ್ಘಟನೆಯಲ್ಲಿ 5,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ಅವಶೇಷಗಳಡಿ ಬದುಕುಳಿದವರ ಶೋಧ ಕಾರ್ಯ ನಡೆಯುತ್ತಿದೆ. ವಿಪರೀತ ಚಳಿ, ಕುಸಿಯುತ್ತಿರುವ ಕಟ್ಟಡಗಳನ್ನು ಲೆಕ್ಕಿಸದೇ ಕಾರ್ಯಕರ್ತರು ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಮಾರ್ಸ್ಚಾಂಗ್ ಶ್ಲಾಘಿಸಿದರು.


ಡಬ್ಲ್ಯುಎಚ್‌ಎಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಮಾತನಾಡಿ, ಸಂಸ್ಥೆ ಈ ಪ್ರದೇಶಕ್ಕೆ ತುರ್ತು ನೆರವು ನೀಡುತ್ತಿದೆ. ಆರೋಗ್ಯ ಸೇವೆ ಸೇರಿದಂತೆ ವೈದ್ಯಕೀಯ ತಂಡ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.