ADVERTISEMENT

ಉತ್ತರ ಐರ್ಲೆಂಡ್‌ನಲ್ಲಿ ಬ್ರಿಟನ್ ಪ್ರಧಾನಿ ಸುನಕ್ - ಅಮೆರಿಕ ಅಧ್ಯಕ್ಷ ಬೈಡನ್ ಭೇಟಿ

ರಾಯಿಟರ್ಸ್
Published 9 ಏಪ್ರಿಲ್ 2023, 5:16 IST
Last Updated 9 ಏಪ್ರಿಲ್ 2023, 5:16 IST
ರಿಷಿ ಸುನಕ್ ಹಾಗೂ ಜೋ ಬೈಡನ್ (ಸಂಗ್ರಹ ಚಿತ್ರ)
ರಿಷಿ ಸುನಕ್ ಹಾಗೂ ಜೋ ಬೈಡನ್ (ಸಂಗ್ರಹ ಚಿತ್ರ)   

ಲಂಡನ್: ಗುಡ್ ಫ್ರೈಡೇ (ಶುಭ ಶುಕ್ರವಾರ) ಶಾಂತಿ ಒಪ್ಪಂದದ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತರ ಐರ್ಲೆಂಡ್‌ಗೆ ತೆರಳಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಲಿದ್ದಾರೆ.

ಮಂಗಳವಾರದಂದು ಬೈಡನ್ ಆಗಮಿಸಲಿದ್ದು, ಅಮೆರಿಕ ಅಧ್ಯಕ್ಷರಾಗಿ ಇಲ್ಲಿಗೆ ಅವರ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ.

ಐರಿಷ್ ರಿಪಬ್ಲಿಕ್‌ನಲ್ಲಿ ತಮ್ಮ ಪೂರ್ವಜನರ ಮನೆಗಳಿಗೂ ಬೈಡನ್ ಭೇಟಿ ನೀಡಲಿದ್ದಾರೆ.

ADVERTISEMENT

1998 ಏಪ್ರಿಲ್ 10ರಂದು ಗುಡ್ ಫ್ರೈಡೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರೊಂದಿಗೆ ಉತ್ತರ ಐರ್ಲೆಂಡ್‌ನಲ್ಲಿ 1960ರ ದಶಕದ ಬಳಿಕ ಉಂಟಾದ ರಾಜಕೀಯ ಸಂಘರ್ಷ, ಹಿಂಸಾಚಾರಕ್ಕೆ ವಿರಾಮ ಬಿತ್ತು.

ಉತ್ತರ ಐರ್ಲೆಂಡ್‌ನ ರಾಜಕೀಯದಲ್ಲಿ ಪ್ರಭಾವಶಾಲಿ ಧ್ವನಿಯಾಗಿ ಅಮೆರಿಕ ಉಳಿದಿದೆ. ಅಲ್ಲದೆ ಲಂಡನ್-ಡಬ್ಲಿನ್‌ನ ಸರ್ಕಾರಗಳು, ಉತ್ತರ ಐರ್ಲೆಂಡ್ ರಾಜಕೀಯ ಪಕ್ಷಗಳ ನಡುವಣ ಗುಡ್ ಫ್ರೈಡೇ ಶಾಂತಿ ಒಪ್ಪಂದದಲ್ಲೂ ಪ್ರಮುಖ ಪಾತ್ರ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.