ADVERTISEMENT

ಉತ್ತರ ಉಕ್ರೇನ್‌ನಿಂದ ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಂಡ ರಷ್ಯಾ

ರಾಯಿಟರ್ಸ್
Published 8 ಏಪ್ರಿಲ್ 2022, 7:49 IST
Last Updated 8 ಏಪ್ರಿಲ್ 2022, 7:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್: ರಷ್ಯಾದ ಪಡೆಗಳು ಈಗ ಉತ್ತರ ಉಕ್ರೇನ್‌ನಿಂದ ಬೆಲಾರಸ್ ಮತ್ತು ರಷ್ಯಾವರೆಗೆ ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಂಡಿವೆ ಎಂದು ಬ್ರಿಟಿಷ್ ಮಿಲಿಟರಿ ಗುಪ್ತಚರ ಸಂಸ್ಥೆ ಶುಕ್ರವಾರ ತಿಳಿಸಿದೆ.

ಹಿಂತೆಗೆದುಕೊಂಡ ರಷ್ಯಾದ ಈ ಪಡೆಗಳಲ್ಲಿ ಕೆಲವನ್ನು ಪೂರ್ವ ಉಕ್ರೇನ್‌‌ನ ಡಾನ್‌ಬಾಸ್‌ನ ಆಕ್ರಮಣಕ್ಕೆ ನಿಯೋಜಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.

ಅಲ್ಲದೆ, ಸೇನೆಯನ್ನು ಪೂರ್ವಕ್ಕೆ ನಿಯೋಜಿಸುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಉತ್ತರದಿಂದ ಪೂರ್ವಕ್ಕೆ ಯಾವುದೇ ಸೇನೆಯನ್ನು ಮರುಹಂಚಿಕೆ ಮಾಡುವಾಗ ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಉಕ್ರೇನ್ ಪೂರ್ವ ಮತ್ತು ದಕ್ಷಿಣದಲ್ಲಿರುವ ನಗರಗಳ ಮೇಲೆ ರಷ್ಯಾದ ಶೆಲ್ ದಾಳಿ ಮುಂದುವರೆದಿದೆ. ತಮ್ಮ ನಿಯಂತ್ರಣದಲ್ಲಿ ಉಳಿದಿರುವ ಇಜಿಯಮ್ ನಗರದಿಂದ ಮತ್ತಷ್ಟು ದಕ್ಷಿಣಕ್ಕೆ ರಷ್ಯಾದ ಪಡೆಗಳು ಮುಂದುವರೆದಿದೆ ಎಂದು ಹೇಳಿದೆ.

ಫೆ.24ರಿಂದ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ರಷ್ಯಾದ ಯುದ್ಧಾಪರಾಧಗಳ ಕುರಿತಂತೆ ಪಾಶ್ಚಿಮಾತ್ಯ ದೇಶಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಬುಕಾ ಪಟ್ಟಣದಲ್ಲಿ ನಾಗರಿಕರ ಹತ್ಯೆಯ ನಂತರ ಹೊಸ ನಿರ್ಬಂಧಗಳನ್ನು ಅನುಸರಿಸಿ, ಯುರೋಪ್‌ ದೇಶಗಳು ರಷ್ಯಾದ ತೈಲ ಮತ್ತು ಅನಿಲ ಖರೀದಿಯನ್ನು ನಿಲ್ಲಿಸಬೇಕು ಎಂದು ಉಕ್ರೇನ್ ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಮಹಾ ಸಭೆಯು ಆದೇಶ ಹೊರಡಿಸಿದೆ. ಉಕ್ರೇನ್‌ನ ಬುಕಾ ನಗರದಿಂದ ವಾಪಸ್ಸಾಗುವಾಗ ರಷ್ಯಾ ಸೇನೆಯು ನೂರಾರು ನಾಗರಿಕರನ್ನು ಕೊಂದು ಹಾಕಿದೆ ಎಂದು ಉಕ್ರೇನ್‌ ಆರೋಪಿಸಿತ್ತು. ಉಕ್ರೇನ್‌ನಲ್ಲಿ ರಷ್ಯಾ ಎಸಗಿರಬಹುದಾದ ಯುದ್ಧಾಪರಾಧಗಳ ಕಾರಣ ಮಾನವ ಹಕ್ಕುಗಳ ಮಂಡಳಿಯಿಂದ ಅದನ್ನು ಅಮಾನತು ಮಾಡುವ ನಿರ್ಣಯವನ್ನು ಸಾಮಾನ್ಯ ಸಭೆ ಮಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.