ADVERTISEMENT

ಉಕ್ರೇನ್‌ನ ಮರಿಯುಪೊಲ್‌ನಲ್ಲಿ ರಷ್ಯಾ ಆಕ್ರಮಣ; ಈವರೆಗೂ 5,000 ಜನರ ಸಾವು

ಏಜೆನ್ಸೀಸ್
Published 28 ಮಾರ್ಚ್ 2022, 16:35 IST
Last Updated 28 ಮಾರ್ಚ್ 2022, 16:35 IST
ಮರಿಯುಪೊಲ್‌ನಲ್ಲಿ ಷೆಲ್‌ ದಾಳಿಯಿಂದ ಹಾನಿಗೆ ಒಳಗಾಗಿರುವ ಅಪಾರ್ಟ್‌ಮೆಂಟ್‌ ಮುಂದೆ ನಿಂತು ಕಣ್ಣೀರು ಸುರಿಸುತ್ತಿರುವ ಮಹಿಳೆ
ಮರಿಯುಪೊಲ್‌ನಲ್ಲಿ ಷೆಲ್‌ ದಾಳಿಯಿಂದ ಹಾನಿಗೆ ಒಳಗಾಗಿರುವ ಅಪಾರ್ಟ್‌ಮೆಂಟ್‌ ಮುಂದೆ ನಿಂತು ಕಣ್ಣೀರು ಸುರಿಸುತ್ತಿರುವ ಮಹಿಳೆ   

ಕೀವ್‌: ಕಳೆದ ತಿಂಗಳು ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದಾಗಿನಿಂದ ಬಂದರು ನಗರ ಮರಿಯುಪೊಲ್‌ನಲ್ಲಿ ಕನಿಷ್ಠ 5,000 ಜನರು ಸಾವಿಗೀಡಾಗಿರುವುದಾಗಿ ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸುಮಾರು 5,000 ಜನರ ಶವಗಳನ್ನು ಹೂಳಲಾಗಿದೆ. ಆದರೆ, ನಿರಂತರವಾಗಿ ಷೆಲ್‌ ದಾಳಿ ನಡೆಯುತ್ತಿರುವುದರಿಂದ 10 ದಿನಗಳ ಹಿಂದೆ ಅಂತ್ಯ ಸಂಸ್ಕಾರ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ' ಎಂದು ಮಾನವೀಯ ಕಾರಿಡಾರ್‌ಗಳ ಉಸ್ತುವಾರಿ ವಹಿಸಿರುವ ಟೆಟ್ಯಾನಾ ಲೊಮಾಕಿನಾ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವ ದೇಹಗಳನ್ನು ಆಧರಿಸಿ ಸಾವಿನ ಸಂಖ್ಯೆಯನ್ನು ಅಂದಾಜಿಸಲಾಗುತ್ತಿದೆ. 10,000 ಮಂದಿ ಸಾವಿಗೀಡಾಗಿರಬಹುದು ಎಂದು ಹೇಳಿದ್ದಾರೆ.

ADVERTISEMENT

ಮರಿಯುಪೋಲ್‌ನಲ್ಲಿ ಸುಮಾರು 1,60,000 ನಾಗರಿಕರು ರಷ್ಯಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿದ್ದಾರೆ. ಅಲ್ಲಿನ ಜನರು ನೀರು, ಆಹಾರ ಹಾಗೂ ಔಷಧಗಳಿಗೆ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.

ಹಿಂದೆ 4,50,000 ಜನರಿಗೆ ಆಶ್ರಯ ನೀಡಿದ್ದ ನಗರದ ಮೇಲೆ ರಷ್ಯಾ ಭೂ ಮಾರ್ಗ, ವಾಯು ಹಾಗೂ ಸಮುದ್ರ ಮಾರ್ಗದಿಂದಲೂ ದಾಳಿ ನಡೆಸಿದ್ದು, ದುರಂತ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಉಕ್ರೇನ್‌ ವಿದೇಶಾಂಗ ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.