ADVERTISEMENT

ಉಕ್ರೇನ್ ವಿಷಯದಲ್ಲಿ ಅಮೆರಿಕದ ಜತೆ ಭಿನ್ನಾಭಿಪ್ರಾಯಗಳಿಲ್ಲ: ರಷ್ಯಾ ಪ್ರತಿಪಾದನೆ

ಏಜೆನ್ಸೀಸ್
Published 11 ಡಿಸೆಂಬರ್ 2025, 11:01 IST
Last Updated 11 ಡಿಸೆಂಬರ್ 2025, 11:01 IST
<div class="paragraphs"><p>ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ಮಾತುಕತೆ ನಡೆಸಿದರು </p></div>

ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ಮಾತುಕತೆ ನಡೆಸಿದರು

   

ಪಿಟಿಐ ಚಿತ್ರ

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್‌, ಈ ತಿಂಗಳ ಆರಂಭದಲ್ಲಿ ನಡೆಸಿದ ಸಭೆಯ ಬಳಿಕ ಉಕ್ರೇನ್‌ ವಿಚಾರವಾಗಿ ಉಭಯ ರಾಷ್ಟ್ರಗಳು ಹೊಂದಿದ್ದ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಗುರುವಾರ ತಿಳಿಸಿದ್ದಾರೆ.

ADVERTISEMENT

ಡಿಸೆಂಬರ್‌ 2ರಂದು ಪುಟಿನ್‌ ಹಾಗೂ ಸ್ಟೀವ್ ಮಾತುಕತೆ ನಡೆಸಿದ್ದರು. ಉಕ್ರೇನ್‌ ಸಮರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧ್ಯವಾಗಿಲ್ಲದಿದ್ದರೂ, ಸಭೆಯು ರಚನಾತ್ಮಕವಾಗಿತ್ತು ಎಂದು ಲಾವ್ರೋವ್‌ ಶ್ಲಾಘಿಸಿದ್ದಾರೆ.

ಅಲಸ್ಕಾದಲ್ಲಿ ಇದೇ ವರ್ಷ ಆಗಸ್ಟ್‌ನಲ್ಲಿ ನಡೆದ ಶೃಂಗ ಸಭೆ ವೇಳೆ ಪುಟಿನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಣ ಪರಸ್ಪರ ಕರಾರು ಏರ್ಪಟ್ಟಿರುವುದನ್ನು ಇತ್ತೀಚಿನ ಮಾತುಕತೆ ದೃಢಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

'ಉಕ್ರೇನ್ ವಿಷಯವಾಗಿ ಅಮೆರಿಕದ ಜೊತೆ ಹೊಂದಿದ್ದ ಭಿನ್ನಾಭಿಪ್ರಾಯಗಳು ಹಾಗೂ ದೋಷಪೂರಿತ ಗ್ರಹಿಕೆ ಈಗ ಬಗೆಹರಿದಿವೆ ಎಂದು ವೈಯಕ್ತಿಕವಾಗಿ ನಂಬಿದ್ದೇನೆ' ಎಂದು ಲಾವ್ರೋವ್‌ ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ದೀರ್ಘಾವಧಿವರೆಗೆ ಸುಸ್ಥಿರ ಶಾಂತಿ ಒಪ್ಪಂದಕ್ಕೆ ಆಧಾರವಾಗಬಲ್ಲ ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಎಲ್ಲ ಪಕ್ಷಗಳಿಗೂ ಒದಗಿಸಬೇಕು. ಆ ನಿಟ್ಟಿನಲ್ಲಿ ಖಾತ್ರಿಯನ್ನು ರಷ್ಯಾ ಬಯಸುತ್ತದೆ ಎಂದು ಸಚಿವ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ ಕೇಂದ್ರೀಕೃತವಾಗಿಯೇ ಭದ್ರತೆಯ ಖಾತ್ರಿ ವಿಚಾರವನ್ನು ಚರ್ಚಿಸಲು ಸಾಧ್ಯವಿಲ್ಲ. ಸಾಮೂಹಿಕ ಭದ್ರತಾ ಖಾತರಿ ಕುರಿತು ಅಮೆರಿಕದ ಸಹೋದ್ಯೋಗಿಗಳಿಗೆ ತಿಳಿಸಿದ್ದೇವೆ. ಹಾಗೆಯೇ, ಉಕ್ರೇನ್ ನ್ಯಾಟೊ ಸದಸ್ಯತ್ವ ಪಡೆಯುವುದನ್ನು ರಷ್ಯಾ ಒಪ್ಪುವುದಿಲ್ಲ. ಉಕ್ರೇನ್‌ನಲ್ಲಿ ರಷ್ಯನ್ ಭಾಷಿಕರಿಗೆ ರಕ್ಷಣೆ ನೀಡಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.