ADVERTISEMENT

ಟರ್ಕಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ರಷ್ಯಾ–ಉಕ್ರೇನ್ ನಿಯೋಗಗಳ ಶಾಂತಿ ಮಾತುಕತೆ

ಏಜೆನ್ಸೀಸ್
Published 29 ಮಾರ್ಚ್ 2022, 11:18 IST
Last Updated 29 ಮಾರ್ಚ್ 2022, 11:18 IST
ಟರ್ಕಿ ಅಧ್ಯಕ್ಷರ ಟ್ವಿಟರ್ ಖಾತೆಯ ಚಿತ್ರ
ಟರ್ಕಿ ಅಧ್ಯಕ್ಷರ ಟ್ವಿಟರ್ ಖಾತೆಯ ಚಿತ್ರ   

ಇಸ್ತಾಂಬುಲ್‌(ಟರ್ಕಿ): ರಷ್ಯಾ ಪಡೆಗಳು ಆಕ್ರಮಿಸಿಕೊಂಡಿರುವ ಪ್ರದೇಶಗಳು ಮತ್ತು ಹೆಚ್ಚು ದಾಳಿಗೆ ತುತ್ತಾಗಿರುವ ಮರಿಯುಪೋಲ್‌ನಿಂದ ನಾಗರಿಕರ ಸ್ಥಳಾಂತರ ಪ್ರಕ್ರಿಯೆಯನ್ನು ಉಕ್ರೇನ್ ಆರಂಭಿಸಿದ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್ ಸಂಧಾನಕಾರರು ಇಸ್ತಾಂಬುಲ್‌ನಲ್ಲಿ ಮುಖಾಮುಖಿ ಸಭೆ ಆರಂಭಿಸಿದ್ದಾರೆ.

ಹಿಂದಿನ ಸಭೆಯಲ್ಲಿ ಸಂಧಾನಕಾರರಿಗೆ ವಿಷವುಣಿಸಲಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಉಪಸ್ಥಿತಿಯಲ್ಲಿ ಈ ಮಾತುಕತೆ ನಡೆಯುತ್ತಿದೆ.

'ಈ ದುರಂತವನ್ನು ಕೊನೆಗಾಣಿಸಲು' ಉಭಯ ದೇಶಗಳ ನಿಯೋಗಗಳಿಗೆ ಎರ್ಡೊಗನ್ ಅವರು ಕರೆ ನೀಡಿದ್ದಾರೆ. ಇಸ್ತಾಂಬುಲ್‌ನ ಡೊಲ್ಮಾಬಾಹ್ಸ್ ಅರಮನೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ಸಭೆ ನಡೆಯುತ್ತಿದೆ., ಇದಕ್ಕೂ ಮುನ್ನ ಮಾತನಾಡಿದ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್, ಎರಡೂ ದೇಶಗಳು ‘ಕಾಳಜಿ’ಹೊಂದಿವೆ ಎಂದು ಹೇಳಿದರು.

ADVERTISEMENT

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಟ್ಯಾಂಕರ್‌ಗಳು ಉಕ್ರೇನ್‌ ಪ್ರವೇಶಿಸಿ ಒಂದು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ.

ರಷ್ಯಾ ಆಕ್ರಮಣದ ನಡುವೆ ಆತಂಕಗೊಂಡ 1 ಕೋಟಿಗೂ ಅಧಿಕ ಜನ ಮನೆಗಳನ್ನು ತೊರೆದಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ.

ಯುದ್ಧದ ಶಾಂತಿಯುತ ಅಂತ್ಯದ ನಿರೀಕ್ಷೆಗಳು ಅಥವಾ ವಿಜಯ ಎರಡೂ ಸಾಧ್ಯತೆಗಳು ಮಸುಕಾದಂತಿದೆ.

ಕೀವ್‌ನ ವಾಯುವ್ಯದಲ್ಲಿರುವ ಉಪನಗರ ಇರ್ಪಿನ್‌ನ ಅಂಚಿನಲ್ಲಿ, ಮಂಗಳವಾರವೂ ಶೆಲ್ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.