
ಪಿಟಿಐ
ಕೀವ್: ರಷ್ಯಾ ಸೇನೆಯನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದ್ದೇವೆ. ನಾಗರಿಕರ ಮೇಲೆ ನಾವು ದಾಳಿ ಮಾಡಿಲ್ಲ ಎಂದು ಉಕ್ರೇನ್ ಶುಕ್ರವಾರ ಸ್ಪಷ್ಟಪಡಿಸಿದೆ.
ರಷ್ಯಾ ವಶಪಡಿಸಿಕೊಂಡಿರುವ, ಉಕ್ರೇನ್‌ನ ಬಂದರು ನಗರಿ ಖೆರ್ಸನ್ ಪ್ರದೇಶದ ಖೊರ್ಲಿ ಎಂಬಲ್ಲಿ ಕೆಫೆ ಮತ್ತು ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ತೊಡಗಿದ್ದವರ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಇದು ಉಕ್ರೇನ್ ನಡೆಸಿದ ರಹಸ್ಯ ದಾಳಿ ಎಂದು ರಷ್ಯಾ ಆರೋಪಿಸಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಉಕ್ರೇನ್ ಸೇನೆಯ ವಕ್ತಾರ ಡಿಮಿಟ್ರೊ ಲೈಖೊವಿಯ್, ‘ರಷ್ಯಾ ಪದೇ ಪದೇ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಉಕ್ರೇನ್‌ನ ರಕ್ಷಣಾ ಪಡೆಗಳು ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸುತ್ತವೆ. ಶತ್ರು ದೇಶದ ಸೇನೆಯನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.