ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಸಂಗ್ರಹ ಚಿತ್ರ)
ನ್ಯೂಯಾರ್ಕ್: ಇರಾನ್ – ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದು ತುರ್ತು ಸಭೆ ಸೇರಲಿದೆ.
ತುರ್ತು ಸಭೆ ಸೇರುವಂತೆ ಇಸ್ರೇಲ್‌ನ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಪತ್ರ ಬರೆದು ವಿಶ್ವಸಂಸ್ಥೆಗೆ ಶನಿವಾರ ಮನವಿ ಮಾಡಿದ್ದರು. ಅಲ್ಲದೇ ‘ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಬೇಕೆಂದು ಇಸ್ರೇಲ್ ಆಗ್ರಹಿಸಿದೆ.
‘ಇಸ್ರೇಲ್ ಮೇಲೆ ಇರಾನ್ ದಾಳಿಯು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆ. ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಂಡಳಿಯು ಎಲ್ಲ ವಿಧಾನಗಳನ್ನು ಪರಿಗಣಿಸುತ್ತದೆ ಎಂದು ಇಸ್ರೇಲ್ ನಿರೀಕ್ಷಿಸುತ್ತದೆ’ ಎಂದು ಗಿಲಾಡ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮಂಡಳಿ ಇಸ್ರೇಲ್ ಮನವಿಯನ್ನು ಪರಿಗಣಿಸಿದ್ದು, ಇಂದು ಸಂಜೆ 4 ಗಂಟೆಯ ಹೊತ್ತಿಗೆ ತುರ್ತು ಸಭೆ ಸೇರಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವೇಳಾಪಟ್ಟಿಯಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.