ADVERTISEMENT

ಅಬೆಗೆ ಸಂತಾಪ ಸೂಚಿಸಲು ಜಪಾನ್‌ಗೆ ತೆರಳಲಿರುವ ಅಮೆರಿಕ ರಾಜತಾಂತ್ರಿಕ ಬ್ಲಿಂಕೆನ್

ಏಜೆನ್ಸೀಸ್
Published 10 ಜುಲೈ 2022, 3:01 IST
Last Updated 10 ಜುಲೈ 2022, 3:01 IST
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ   

ವಾಷಿಂಗ್ಟನ್‌: ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಸಂತಾಪ ಸೂಚಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಥೋನಿ ಬ್ಲಿಂಕೆನ್‌ ಅವರುಸೋಮವಾರ ಜಪಾನ್‌ಗೆ ತೆರಳಲಿದ್ದಾರೆ.ಈ ಸಂಬಂಧ ಇಲಾಖೆಯ ವಕ್ತಾರ ನೆಡ್‌ ಪ್ರೈಸ್‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆಗೆ ಸಂತಾಪ ಸೂಚಿಸಲುಕಾರ್ಯದರ್ಶಿ ಬ್ಲಿಂಕೆನ್‌ ಅವರು ಟೋಕಿಯೊಗೆ ಪ್ರಯಾಣಿಸಲಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆ. ಅಮೆರಿಕ-ಜಪಾನ್ ಮೈತ್ರಿಯು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಆಧಾರವಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ಲಿಂಕೆನ್‌, ಅಬೆ ಹತ್ಯೆ ಬಳಿಕ ಜಪಾನ್‌ಗೆ ಭೇಟಿ ನೀಡುತ್ತಿರುವ ಅಮೆರಿಕದ ಉನ್ನತ ಅಧಿಕಾರಿ ಎನಿಸಿದ್ದಾರೆ.ಅವರು ಸದ್ಯ ಪೂರ್ವ ನಿಗದಿತ ಭೇಟಿ ಸಲುವಾಗಿ ಥೈಲ್ಯಾಂಡ್‌ನಲ್ಲಿದ್ದಾರೆ. ಅಬೆ ಅವರ ಹತ್ಯೆಯಾದಾಗ (ಶುಕ್ರವಾರ) ಜಿ–20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಸಲುವಾಗಿ ಇಂಡೋನೇಷ್ಯಾದ ಬಾಲಿಯಲ್ಲಿದ್ದರು.

ADVERTISEMENT

ಬಾಲಿಯಲ್ಲಿ ಮಾತನಾಡಿದ್ದ ಬ್ಲಿಂಕೆನ್‌, ಅಬೆ ಹತ್ಯೆಯು ಪ್ರಪಂಚದ ಪಾಲಿಗೆ ದುರಂತ ಎಂದು ಖಂಡಿಸಿದ್ದರು.

ಜಪಾನ್‌ನ ಮೇಲ್ಮನೆಗೆ ಇಂದು (ಭಾನುವಾರ) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಜಪಾನ್‌ನ ನಾರಾ ಪ್ರದೇಶದಲ್ಲಿಶುಕ್ರವಾರ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಅಬೆ ಅವರ ಮೇಲೆ ತೆತ್ಸುಯ ಯಮಾಗಾಮಿ ಗುಂಡಿನ ದಾಳಿ ನಡೆಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.