ADVERTISEMENT

ಕ್ಯೂಬಾ ವಲಸಿಗನಿಂದ ಕನ್ನಡಿಗನ ಕೊಲೆ: ಬೈಡನ್ ವಲಸೆ ನೀತಿ ಖಂಡಿಸಿದ ಟ್ರಂಪ್

ಪಿಟಿಐ
Published 15 ಸೆಪ್ಟೆಂಬರ್ 2025, 4:45 IST
Last Updated 15 ಸೆಪ್ಟೆಂಬರ್ 2025, 4:45 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

   

ರಾಯಿಟರ್ಸ್‌ ಚಿತ್ರ

ಹ್ಯೂಸ್ಟನ್: ದಾಖಲೆಗಳು ಇಲ್ಲದ ಕ್ಯೂಬಾದ ವಲಸಿಗ, ಕನ್ನಡಿಗರೊಬ್ಬರ ತಲೆ ಕಡಿದು ಕೊಂದ ಪ್ರಕರಣ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ ರೂಪಿಸಲಾದ ವಲಸೆ ನೀತಿಯನ್ನು ಖಂಡಿಸಿದ್ದಾರೆ.

ADVERTISEMENT

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂಥ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕೊಲೆ ಆರೋಪಿಯನ್ನು ‘ಕಾನೂನುಬಾಹಿರ ಏಲಿಯನ್’ ಎಂದು ಕರೆದಿದ್ದಾರೆ. ಗಡೀಪಾರಗಬೇಕಿದ್ದ ಆತ, ಜೋ ಬೈಡನ್ ಅವರ ಸೌಮ್ಯ ವಲಸೆ ನೀತಿಯಿಂದ ಉಳಿದುಕೊಂಡಿದ್ದಾನೆ ಎಂದು ಹೇಳಿದ್ದಾರೆ.

‘ಅಕ್ರಮ ವಲಸಿಗರ ಕ್ರಿಮಿನಲ್‌ಗಳ ಬಗ್ಗೆ ಸೌಮ್ಯದಿಂದ ಇರುವ ಕಾಲ ಮುಗಿಯಿತು’ ಎಂದು ಹೇಳಿದ್ದಾರೆ.

ಕರ್ನಾಟಕ ಮೂಲದ 50 ವರ್ಷದ ಚಂದ್ರ ಮೌಳಿ ನಾಗಮಲ್ಲಯ್ಯ ಎಂಬವರನ್ನು ಸೆಪ್ಟೆಂಬರ್ 10 ರಂದು ಅವರು ಕೆಲಸ ಮಾಡುತ್ತಿದ್ದ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿತ್ತು.

ಮೃತ ವ್ಯಕ್ತಿಯ 18 ವರ್ಷದ ಮಗ ಹಾಗೂ ಪತ್ನಿಯೇ ಮುಂದೆಯೇ ನಡೆದ ಈ ಕೃತ್ಯ ಇಂಡೊ–ಅಮೆರಿಕನ್ ಸಮುದಾಯವನ್ನು ಆತಂಕಕ್ಕೀಡುಮಾಡಿತ್ತು.

37 ವರ್ಷ ಕ್ಯೂಬಾ ಮೂಲದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ ಮೇಲೆ ಈ ಕೊಲೆ ಆರೋಪ ನಿಗದಿ ಪಡಿಸಲಾಗಿದೆ.

ಈ ಹಿಂದೆ ಆತನನ್ನು ಬಂಧಿಸಲಾಗಿತ್ತು ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆತನನ್ನು ಸ್ವೀಕರಿಲು ಕ್ಯೂಬಾ ನಿರಾಕರಿಸಿದ ಕಾರಣ, 2025ರ ಜನವರಿಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ನಾಗಮಲ್ಲಯ್ಯ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 13 ರಂದು ಟೆಕ್ಸಾಸ್‌ನ ಫ್ಲವರ್ ಮೌಂಡ್‌ನಲ್ಲಿ ನಡೆಯಿತು. ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.