ADVERTISEMENT

ಅಮೆರಿಕವನ್ನು ಭಾರತ ಚೆನ್ನಾಗಿ ನೋಡಿಕೊಂಡಿಲ್ಲ, ಆದರೆ ನನಗೆ ಮೋದಿ ಇಷ್ಟ: ಟ್ರಂಪ್ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 10:45 IST
Last Updated 19 ಫೆಬ್ರುವರಿ 2020, 10:45 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ನವದೆಹಲಿ: ವ್ಯಾಪಾರ ಒಪ್ಪಂದದ ವಿಷಯಕ್ಕೆ ಬಂದರೆ ಭಾರತ ನನ್ನ ದೇಶವನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಜಾಯಿಂಟ್ ಬೇಸ್ ಆ್ಯಂಡ್ರೂಸ್‌ನಲ್ಲಿ ಮಂಗಳವಾರ ಮಧ್ಯಾಹ್ನ (ಸ್ಥಳೀಯ ಕಾಲಮಾನ) ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ನಮ್ಮನ್ನು ಭಾರತ ಚೆನ್ನಾಗಿ ನೋಡಿಕೊಂಡಿಲ್ಲ. ಆದರೆ ಮೋದಿ ನನಗೆ ತುಂಬಾ ಇಷ್ಟ ಎಂದಿದ್ದಾರೆ.

ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗಲು
ಏಳು ದಶಲಕ್ಷ ಜನರು ಬರಲಿದ್ದಾರೆ ಎಂದು ಅವರು (ಮೋದಿ)ಹೇಳಿದ್ದಾರೆ. ಕ್ರೀಡಾಂಗಣವೊಂದು ನಿರ್ಮಾಣ ಹಂತದಲ್ಲಿದ್ದು ಜಗತ್ತಿನ ಅತೀ ದೊಡ್ಡ ಕ್ರೀಡಾಂಗಣ ಅದಾಗಲಿದೆ. ಅದು ಸಂಭ್ರಮದಿಂದ ಕೂಡಿರುತ್ತದೆ. ನೀವು ಕೂಡಾ ಆಸ್ವಾದಿಸುತ್ತೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ ಟ್ರಂಪ್.

ADVERTISEMENT

ಫೆಬ್ರುವರಿ 24ರಂದು ಭಾರತಕ್ಕೆ ಟ್ರಂಪ್ ಆಗಮಿಸಲಿದ್ದು ಇವರ ಸ್ವಾಗತಕ್ಕೆ ಗುಜರಾತಿನಲ್ಲಿ ಭರದಸಿದ್ಧತೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.