ADVERTISEMENT

ಜಿ–7 ವಿಸ್ತರಿಸಿ, ಭಾರತಕ್ಕೆ ಸ್ಥಾನ: ಡೊನಾಲ್ಡ್‌ ಟ್ರಂಪ್‌

ಪಿಟಿಐ
Published 31 ಮೇ 2020, 20:15 IST
Last Updated 31 ಮೇ 2020, 20:15 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಜಿ–7 ಶೃಂಗಸಭೆಯನ್ನು ಸೆಪ್ಟೆಂಬರ್‌ವರೆಗೆ ಮುಂದೂಡಲಾಗಿದೆ ಎಂದುಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಜಗತ್ತಿನಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನುಜಿ–7 ಸಮರ್ಪಕವಾಗಿ ಪ್ರತಿನಿಧಿಸುತ್ತದೆ ಎಂದು ಅನಿಸುವುದಿಲ್ಲ. ಇದು ಹಳೆಯ ಗುಂಪಾಗಿದೆ. ಹಾಗಾಗಿ ಈ ಶೃಂಗಸಭೆಯನ್ನು ಜಿ–10 ಅಥವಾ ಜಿ–11 ಎಂದು ವಿಸ್ತರಿಸಿ ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ರಷ್ಯಾ ರಾಷ್ಟ್ರಗಳನ್ನು ಆಹ್ವಾನಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಜಿ–10 ಅಥವಾ ಜಿ–11 ರಾಷ್ಟ್ರಗಳ ಗುಂಪಾಗಿ ರಚಿಸಬಹುದು. ಅಮೆರಿಕದಲ್ಲಿ ಚುನಾವಣೆ ಪೂರ್ಣಗೊಂಡ ನಂತರ ಶೃಂಗಸಭೆ ಆಯೋಜನೆಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.