ADVERTISEMENT

ಆ್ಯಂಟನಿ ಬ್ಲಿಂಕನ್ ಚೀನಾ ಭೇಟಿ ಬೆನ್ನಲ್ಲೇ ಷಿ ಜಿನ್‌ಪಿಂಗ್ ‘ಸರ್ವಾಧಿಕಾರಿ’ ಎಂದ ಬೈಡನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2023, 7:31 IST
Last Updated 21 ಜೂನ್ 2023, 7:31 IST
ಜೋ ಬೈಡನ್ ಹಾಗೂ ಕ್ಸಿ ಜಿನ್‌ಪಿಂಗ್
ಜೋ ಬೈಡನ್ ಹಾಗೂ ಕ್ಸಿ ಜಿನ್‌ಪಿಂಗ್    

ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ‘ಸರ್ವಾಧಿಕಾರಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಡುಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಮೆರಿಕ ಮೇಲೆ ಚೀನಾದ ಬಲೂನ್ ಹಾರಿದಾಗ ಷಿ ಜಿನ್‌ಪಿಂಗ್ ತುಂಬಾ ಮುಜುಗರಕ್ಕೊಳಗಾಗಿದ್ದರು ಎಂದು ಬೈಡನ್ ವ್ಯಂಗ್ಯವಾಡಿದ್ದಾರೆ.

‘ಬಲೂನ್ ಹೊಡೆದುರುಳಿಸಿದ ಘಟನೆಯಿಂದ ಸರ್ವಾಧಿಕಾರಿಗೆ (ಷಿ ಜಿನ್‌ಪಿಂಗ್) ದೊಡ್ಡ ಮುಜುಗರವಾಗಿದೆ. ಬಲೂನ್ ಎಲ್ಲಿಗೆ ಹೋಗುತ್ತಿದೆ. ಏನಾಯಿತು ಎಂದು ಅವರಿಗೆ ತಿಳಿದಿಲ್ಲರಲಿಲ್ಲ’ ಎಂದು ಬೈಡನ್ ಹೇಳಿದ್ದಾರೆ.

ADVERTISEMENT

ಚೀನಾ ನಿಜವಾದ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಬೈಡನ್ ಟೀಕಿಸಿದ್ದಾರೆ.

ಎರಡು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು ಸೋಮವಾರ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ಇದರ ಬೆನ್ನಲ್ಲೇ ಜೋ ಬೈಡೆನ್ ಅವರು ಜಿನ್‌ಪಿಂಗ್ ನಡೆಯನ್ನು ಟೀಕಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಫೆಬ್ರುವರಿ ತಿಂಗಳಲ್ಲಿ ತನ್ನ ವಾಯುಗಡಿಯ ಪರಿಮಿತಿಯಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿತ್ತು.

ಉಭಯ ದೇಶಗಳ ಉದ್ವಿಗ್ನತೆ ಶಮನಕ್ಕೆ ಪ್ರಯತ್ನವೆಂಬಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಕ್ಕೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.