ADVERTISEMENT

ಉತ್ತರ ಕೊರಿಯಾದಿಂದ ರಷ್ಯಾ ಶಸ್ತ್ರಾಸ್ತ್ರ ಖರೀದಿ: ಅಮೆರಿಕ

ಏಜೆನ್ಸೀಸ್
Published 6 ಸೆಪ್ಟೆಂಬರ್ 2022, 12:56 IST
Last Updated 6 ಸೆಪ್ಟೆಂಬರ್ 2022, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಉಕ್ರೇನ್‌ನೊಂದಿಗಿನ ಯುದ್ಧಕ್ಕಾಗಿ ರಷ್ಯಾದ ರಕ್ಷಣಾ ಸಚಿವಾಲಯ ಉತ್ತರ ಕೊರಿಯಾದಿಂದ ಲಕ್ಷಾಂತರ ರಾಕೆಟ್‌ಗಳು, ಫಿರಂಗಿ ಗುಂಡುಗಳನ್ನು ಖರೀದಿಸಲು ಮುಂದಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿದೆ.

‘ಆಮದು ನಿರ್ಬಂಧ ಮತ್ತು ನಿಷೇಧದ ಪರಿಣಾಮ ರಷ್ಯಾ ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ತೀವ್ರ ಅಭಾವ ಎದುರಿಸುತ್ತಿದೆ. ಹೀಗಾಗಿ ಉತ್ತರ ಕೊರಿಯಾದಿಂದ ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಯೋಚನೆಯಲ್ಲಿದೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ರಷ್ಯಾವು ಎಷ್ಟು ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.