ADVERTISEMENT

ಅಮೆರಿಕಕ್ಕೆ ಮಹಿಳಾ ಅಧ್ಯಕ್ಷೆ: ನಿಕ್ಕಿ ಹ್ಯಾಲೆ ವಿಶ್ವಾಸ

ಪಿಟಿಐ
Published 9 ಫೆಬ್ರುವರಿ 2024, 16:19 IST
Last Updated 9 ಫೆಬ್ರುವರಿ 2024, 16:19 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ‘ಅಮೆರಿಕವು 2024ರಲ್ಲಿ ಮಹಿಳಾ ಅಧ್ಯಕ್ಷರನ್ನು ಹೊಂದಲಿದೆ. ಅದು ನಾನಾಗಿರಬಹುದು ಅಥವಾ ಕಮಲಾ ಹ್ಯಾರಿಸ್‌ ಆಗಿರಬಹುದು. ನಾವಿಬ್ಬರೂ ಭಾರತೀಯ ಮೂಲದವರು’ ಎಂದು ರಿಪಬ್ಲಿಕನ್‌ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ತನ್ನದೇ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆಯಲ್ಲಿ ಉಳಿದಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ. 

ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಸಂಬಂಧ, ನೆವಡಾ ಮತ್ತು ಯುಎಸ್‌ ವರ್ಜಿನ್‌ ದ್ವೀಪಗಳಲ್ಲಿ ಗುರುವಾರ ನಡೆದ ಪಕ್ಷದ ಚುನಾವಣೆಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆಲುವು ಸಾಧಿಸಿದ ನಂತರವೂ, ‘ಶ್ವೇತಭವನ ಪ್ರವೇಶಿಸುವ ಸ್ಪರ್ಧೆಯಲ್ಲಿ ನಾನು ಉಳಿಯುವೆ’ ಎಂಬ ವಿಶ್ವಾಸವನ್ನು ಹ್ಯಾಲೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಾರ್ವತ್ರಿಕ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಲು ಸಾಧ್ಯವಿಲ್ಲ. ಅದು ಸತ್ಯ. 2018, 2020, 2022ರಲ್ಲೂ ನಾವು ಸೋತಿದ್ದೇವೆ. ಆದರೆ ಅವರಿನ್ನೂ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಅವ್ಯವಸ್ಥೆ. ಅವರೇ ಮತ್ತೆ ಮುಂದುವರಿದರೆ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’ ಎಂದು ನಿಕ್ಕಿ ಹ್ಯಾಲೆ ಫಾಕ್ಸ್‌ ನ್ಯೂಸ್‌ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.