ADVERTISEMENT

ಎಸ್‌ಸಿಒಯ ಮೊದಲ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ ವಾರಾಣಸಿ

ಪಿಟಿಐ
Published 15 ಜುಲೈ 2022, 13:06 IST
Last Updated 15 ಜುಲೈ 2022, 13:06 IST
ವಾರಾಣಸಿಯ ದೃಶ್ಯ
ವಾರಾಣಸಿಯ ದೃಶ್ಯ   

ಬೀಜಿಂಗ್ : ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ನಗರವಾದ ವಾರಾಣಸಿಯನ್ನು ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಮೊದಲ ‘ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ’ ಎಂದು ಘೋಷಿಸಲಾಗುವುದು ಎಂದುಎಸ್‌ಸಿಒ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಶುಕ್ರವಾರ ಹೇಳಿದರು.

ಬೀಜಿಂಗ್ ಪ್ರಧಾನ ಕಚೇರಿಯನ್ನು ಹೊಂದಿರುವ ಶಾಂಘೈ ಸಹಕಾರ ಸಂಸ್ಥೆ ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡ ಎಂಟು ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಭದ್ರತಾ ಒಕ್ಕೂಟವಾಗಿದೆ.

ಸದಸ್ಯ ರಾಷ್ಟ್ರಗಳ ನಡುವೆ ಜನರಿಂದ ಜನರ ಸಂಪರ್ಕ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಎಂಟು ಸದಸ್ಯ ರಾಷ್ಟ್ರಗಳ ಸಂಘಟನೆಯ ಹೊಸ ‍ಪ್ರಯತ್ನದ ಭಾಗವಾಗಿ ಈ ಘೋಷಣೆ ಮಾಡಲಾಗಿದೆ ಎಂದು ಜಾಂಗ್ ಹೇಳಿದರು.

ADVERTISEMENT

‘ನಾವು ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿಯ ಶೀರ್ಷಿಕೆಯನ್ನು ಬೇರೆ ಬೇರೆ ನಗರಗಳಿಗೂ ನೀಡುತ್ತೇವೆ ’ಎಂದು ಹೇಳಿದ ಜಾಂಗ್‌, ಮೊಟ್ಟ ಮೊದಲ ಬಾರಿಗೆ ಭಾರತದ ಪ್ರಾಚೀನ ನಗರವಾದ ವಾರಾಣಸಿಗೆ ಈ ಶೀರ್ಷಿಕೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.