ADVERTISEMENT

ನ್ಯಾಟೊ ಪ್ರದೇಶದ ಮೇಲೆ ರಷ್ಯಾ ಕಾಲ ಬೆರಳಿಟ್ಟರೂ ಯುದ್ಧಕ್ಕೆ ನಾಂದಿ: ಬ್ರಿಟನ್

ರಷ್ಯಾ ಸೇನೆಗೆ ಬ್ರಿಟನ್ ಸರ್ಕಾರ ಎಚ್ಚರಿಕೆ ಸಂದೇಶ

ರಾಯಿಟರ್ಸ್
Published 14 ಮಾರ್ಚ್ 2022, 13:00 IST
Last Updated 14 ಮಾರ್ಚ್ 2022, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್(ರಾಯಿಟರ್ಸ್): ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಸೇನೆಯು 'ನ್ಯಾಟೊ' ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸದು ಎಂದು ಹೇಳಲಾಗದು. ಆದರೆ, ರಷ್ಯಾ ಇಂಥ ಕೆಲಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎಂದು ಬ್ರಿಟನ್ ಆರೋಗ್ಯ ಸಚಿವ ಸಾಜೀದ್ ಜಾವಿದ್ ಅವರು ಹೇಳಿದ್ದಾರೆ.

ರಷ್ಯಾ ಏನಾದರೂ ದಾಳಿ ನಡೆಸಿದರೆ, ನ್ಯಾಟೊ ಸದಸ್ಯ ರಾಷ್ಟ್ರಗಳು ಅದಕ್ಕೆ ತಕ್ಕ ಉತ್ತರ ನೀಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯಾಟೊ ಪ್ರದೇಶಗಳ ಮೇಲೆ ರಷ್ಯಾದ ಕ್ಷಿಪಣಿಗಳು ಲಗ್ಗೆ ಇಡುವ ಸಾಧ್ಯತೆ ಬಗ್ಗೆ ಸೋಮವಾರ ಮಾತನಾಡಿದ ಅವರು, ನ್ಯಾಟೊ ಪ್ರದೇಶದ ಮೇಲೆ ರಷ್ಯಾ ಸೇನೆ ಒಂದೇ ಒಂದು ಕಾಲಿಟ್ಟರೂ ಅದು ಯುದ್ಧಕ್ಕೆ ಕಾರಣವಾಗಲಿದೆ ಎಂಬ ವಿಚಾರವನ್ನುಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಆರಂಭದಿಂದಲೂ ನಾವು ತಿಳಿಸಿದ್ದೇವೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.