ADVERTISEMENT

ಶ್ವೇತಭವನದ ಬಳಿ ಗುಂಡಿನ ದಾಳಿ: ಭಯೋತ್ಪಾದಕ ಕೃತ್ಯ ಎಂದ ಟ್ರಂಪ್

ಏಜೆನ್ಸೀಸ್
Published 27 ನವೆಂಬರ್ 2025, 5:12 IST
Last Updated 27 ನವೆಂಬರ್ 2025, 5:12 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌: ಶ್ವೇತಭವನದ ಸಮೀಪ ರಾಷ್ಟ್ರೀಯ ಭದ್ರತಾ ಪಡೆಯ ಯೋಧರ ಮೇಲೆ ನಡೆದ ಗುಂಡಿನ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕರೆದಿದ್ದಾರೆ.

ಇಂದು ಬೆಳಿಗ್ಗೆ(ಗುರುವಾರ) ಶ್ವೇತಭವನದಿಂದ ಅನತಿ ದೂರದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ರಾಷ್ಟ್ರ ರಾಜಧಾನಿ ವಾಷಿಂಗ್ಟನ್‌ಗೆ ನಿಯೋಜನೆಗೊಂಡಿದ್ದ ವೆಸ್ಟ್‌ ವರ್ಜೀನಿಯಾದ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಯು ಅಫ್ಗಾನ್‌ ಮೂಲದವನಾಗಿದ್ದು, 2021ರಲ್ಲಿ ಅಮೆರಿಕ ಪ್ರವೇಶಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

ADVERTISEMENT

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಇದೊಂದು ದ್ವೇಷದ ಮತ್ತು ಭಯೋತ್ಪಾದಕ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಆರೋಪಿಯನ್ನು ಪ್ರಾಣಿಗೆ ಹೋಲಿಸಿರುವ ಅವರು, ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಆಡಳಿತಾವಧಿಯಲ್ಲಿ ಅಮೆರಿಕ ಪ್ರವೇಶಿಸಿದ ಅಫ್ಗಾನ್‌ ವಲಸಿಗರನ್ನು ಮರು ಪರಿಶೀಲಿಸುವಂತೆಯೂ ಆದೇಶಿಸಿದ್ದಾರೆ.

ಏತನ್ಮಧ್ಯೆ, ವಾಷಿಂಗ್ಟನ್‌ನಲ್ಲಿ ಭದ್ರತೆ ಬಲಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.