ADVERTISEMENT

ಉಕ್ರೇನ್‌ ಬಳಿ ರಷ್ಯಾದ ಯುದ್ಧ ಸಿದ್ಧತೆ ಹೆಚ್ಚಳ: ಯುರೋಪ್‌ಗೆ ಅಪಾಯ ಎಂದ ನ್ಯಾಟೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 12:59 IST
Last Updated 10 ಫೆಬ್ರುವರಿ 2022, 12:59 IST
ಉಕ್ರೇನ್‌ ಗಡಿಯತ್ತ ಸಾಗುತ್ತಿರುವ ರಷ್ಯಾದ ಕ್ಷಿಪಣಿ ಉಡಾವಣಾ ವಾಹನಗಳು
ಉಕ್ರೇನ್‌ ಗಡಿಯತ್ತ ಸಾಗುತ್ತಿರುವ ರಷ್ಯಾದ ಕ್ಷಿಪಣಿ ಉಡಾವಣಾ ವಾಹನಗಳು    

ಬ್ರಸೆಲ್ಸ್‌: ಉಕ್ರೇನ್ ಗಡಿಯಲ್ಲಿ ರಷ್ಯಾದ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸಂಭವನೀಯ ದಾಳಿಯ ಸಮಯ ಸಮೀಪಿಸುತ್ತಿದೆ. ಇದು ಯುರೋಪ್‌ಗೆ ಭದ್ರತೆಗೆ ಅಪಾಯಕಾರಿ ಕ್ಷಣ‘ ಎಂದು ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ಬ್ರಸೆಲ್ಸ್‌ನಲ್ಲಿ ಗುರುವಾರ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ನಡೆದ ಸಭೆಯ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.

‘ಯುರೋಪ್‌ ಭದ್ರತೆಗೆ ಸಂಬಂಧಿಸಿದಂತೆ ಇದು ಅಪಾಯಕಾರಿ ಕ್ಷಣ. ರಷ್ಯಾದ ಪಡೆಗಳ ಸಂಖ್ಯೆ ಹೆಚ್ಚುತ್ತಿದೆ. ಸಂಭವನೀಯ ದಾಳಿಯ ಸಮಯ ಹತ್ತಿರವಾಗುತ್ತಿದೆ’ ಎಂದು ಸ್ಟೋಲ್ಟೆನ್‌ಬರ್ಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಬೋರಿಸ್‌ ಜಾನ್ಸನ್‌ ಕೂಡ ಜೊತೆಗಿದ್ದರು.

ADVERTISEMENT

‘ರಷ್ಯಾಕ್ಕೆ ನ್ಯಾಟೊ ಬೆದರಿಕೆಯಲ್ಲ. ಆದರೆ ರಾಜಕೀಯ ಪರಿಹಾರ ಸಿಗುವ ವರೆಗೆ, ನಾವು ಯಾವುದೇ ಸನ್ನಿವೇಶವನ್ನೂ ಎದುರಿಸಲು ಒಗ್ಗಟ್ಟಾಗಿರಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.