ADVERTISEMENT

ಉಜ್ಬೇಕಿಸ್ತಾನ: ಭಾರತದ ಸಂಸ್ಥೆಯ ಕೆಮ್ಮಿನ ಸಿರಪ್ ಬಳಸದಂತೆ ಡಬ್ಲ್ಯುಎಚ್‌ಒ ಸೂಚನೆ

ರಾಯಿಟರ್ಸ್
Published 12 ಜನವರಿ 2023, 2:17 IST
Last Updated 12 ಜನವರಿ 2023, 2:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉಜ್ಬೇಕಿಸ್ತಾನದಲ್ಲಿರುವ ಮಕ್ಕಳಿಗೆ ಭಾರತದ ಔಷಧೀಯ ಸಂಸ್ಥೆ ಮರಿಯನ್ ಬಯೋಟೆಕ್ ತಯಾರಿಸಿರುವ ಎರಡು ಕೆಮ್ಮಿನ ಸಿರಪ್‌ಗಳನ್ನು ಬಳಕೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು‌ಎಚ್‌ಒ) ಸೂಚನೆ ನೀಡಿದೆ.

ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ತೆಗೆದುಕೂಳ್ಳದಂತೆ ಡಬ್ಲ್ಯು‌ಎಚ್‌ಒ ಸೂಚಿಸಿದೆ.

ಇಲ್ಲಿಯವರೆಗೆ ಔಷಧಿಯ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮರಿಯನ್ ಬಯೋಟೆಕ್ ಯಾವುದೇ ಖಾತ್ರಿಯನ್ನು ನೀಡಿಲ್ಲ ಎಂದು ಉಲ್ಲೇಖಿಸಿದೆ.

ಇತ್ತೀಚೆಗೆ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಸೇವನೆಯಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದರು.

ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯದ ಪರೀಶೀಲನೆಯಲ್ಲಿ ಕೆಮ್ಮಿನ ಸಿರಪ್‌ಗಳಲ್ಲಿ ಎಥಿಲೀನ್ ಗ್ಲೈಕೋಲ್‌ನ ವಿಷಕಾರಿ ರಾಸಾಯನಿಕ ಪತ್ತೆಯಾಗಿತ್ತು. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ನೀಡಿರುವುದು, ಶೀತಕ್ಕೆ ಪರಿಹಾರವಾಗಿ ಪೋಷಕರು ಸ್ವಂತ ವಿವೇಚನೆ ಅಥವಾ ಔಷಧ ಮಾರಾಟಗಾರರ ಶಿಫಾರಸಿನ ಮೇರೆಗೆ ತಪ್ಪಾಗಿ ಅರ್ಥೈಸಿರಬಹುದು ಎಂದು ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.