ADVERTISEMENT

ಕೊರೊನಾ ವೈರಸ್‌| ವಿಯೆಟ್ನಾಮ್‌ನಲ್ಲಿ ಪತ್ತೆಯಾಗಿದ್ದು ಭಾರತ ಮಾದರಿಯ ಮತ್ತೊಂದು ತಳಿ

ರಾಯಿಟರ್ಸ್
Published 3 ಜೂನ್ 2021, 11:04 IST
Last Updated 3 ಜೂನ್ 2021, 11:04 IST
ಪ್ರಾತಿನಿಧಿ ಚಿತ್ರ
ಪ್ರಾತಿನಿಧಿ ಚಿತ್ರ    

ಹನೋಯಿ: ವಿಯೆಟ್ನಾಮ್‌ನಲ್ಲಿ ಪತ್ತೆಯಾಗಿರುವ ಹೊಸ ತಳಿಯ ಕೊರೊನಾ ವೈರಸ್‌ ಭಾರತ–ಬ್ರಿಟನ್‌ ಮಾದರಿಯ ವೈರಸ್‌ ಸಂಯೋಜಿತ ಸಂಕರ ತಳಿ(ಹೈಬ್ರೀಡ್‌) ಅಲ್ಲ. ಬದಲಾಗಿ ಅದು ಭಾರತದ ಡೆಲ್ಟಾ ಮಾದರಿಯ ಕೊರೊನಾ ವೈರಸ್‌ (B.1.617)ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಯೆಟ್ನಾಮ್‌ ಪ್ರತಿನಿಧಿ ತಿಳಿಸಿದ್ದಾರೆ.

ಭಾರತದ ಡೆಲ್ಟಾಮಾದರಿಯ ಕೊರೊನಾ ವೈರಸ್‌ ಮತ್ತು ಬ್ರಟಿನ್‌ನ ಆಲ್ಫಾ ಮಾದರಿಗಳ ಸಂಕರ ತಳಿಯೊಂದು ಪತ್ತೆಯಾಗಿದೆ ಎಂದು ವಿಯೆಟ್ನಾಮ್‌ನ ಅಧಿಕಾರಿಗಳು ಕಳೆದ ವಾರ ಹೇಳಿದ್ದರು.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನಗಳ ಪ್ರಕಾರ ವಿಯೆಟ್ನಾಮ್‌ನಲ್ಲಿ ಈ ಹೊತ್ತಿನಲ್ಲಿ ಯಾವುದೇ ಸಂಕರ ತಳಿ ಪತ್ತೆಯಾಗಿಲ್ಲ. ಈಗ ಪತ್ತೆಯಾಗಿರುವ ಹೊಸ ತಳಿಯು ಭಾರತದಲ್ಲಿ ಪತ್ತೆಯಾಗಿರುವ ಡೆಲ್ಟಾ ಮಾದರಿಯ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರ ತಳಿಯಷ್ಟೇ ಎಂದುವಿಶ್ವಸಂಸ್ಥೆಯ ವಿಯೆಟ್ನಾಮ್‌ ಪ್ರತಿನಿಧಿ ಕಿಡೋಂಗ್‌ ಪರ್ಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.