ADVERTISEMENT

ಕೋವಿಡ್–19 ನಿಯಂತ್ರಣಕ್ಕೆ ಚೀನಾ ಪಣ: ವುಹಾನ್‌ಗೆ ಷಿ ಜಿನ್‌ಪಿಂಗ್ ಭೇಟಿ

ಪಿಟಿಐ
Published 10 ಮಾರ್ಚ್ 2020, 19:32 IST
Last Updated 10 ಮಾರ್ಚ್ 2020, 19:32 IST
ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್   

ಬೀಜಿಂಗ್/ವುಹಾನ್: ಕೋವಿಡ್‌–19 ಪ್ರಥಮ ಪ್ರಕರಣ ಪತ್ತೆಯಾದ ಹ್ಯುಬೆ ಪ್ರಾಂತ್ಯದ ವುಹಾನ್‌ ನಗರಕ್ಕೆ ಮಂಗಳವಾರ ಚೀನಾದ
ಅಧ್ಯಕ್ಷ ಷಿ ಜಿನ್‌ಪಿಂಗ್ ಮೊದಲ ಬಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹ್ಯುಬೆ ಪ್ರಾಂತ್ಯದ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಗಳನ್ನು ಪರಿಶೀಲಿಸಿದ ಅವರು, ನಂತರ ವುಹಾನ್‌ಗೆ ಭೇಟಿ ನೀಡಿದರು.

ವುಹಾನ್‌ನ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೋವಿಡ್‌–19 ವಿರುದ್ಧ ಯಶಸ್ಸು ಸಾಧಿಸಲು ಪಣ ತೊಡುವುದಾಗಿ ಷಿ ಜಿನ್‌ಪಿಂಗ್ ಹೇಳಿದ್ದಾರೆ.

ADVERTISEMENT

ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಹಾಗೂ ಹ್ಯುಬೆ ಮತ್ತು ವುಹಾನ್‌ನಲ್ಲಿ ಕೋವಿಡ್‌–19 ಉಬ್ಬರವಿಳಿತಗಳನ್ನು ನಿಯಂತ್ರಿಸುವಲ್ಲಿ ಆರಂಭಿಕ ಯಶಸ್ಸು ಗಳಿಸಲಾಗಿದೆ ಎಂದು ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.