ಬೆಂಗಳೂರು: ಹುತಾತ್ಮ ಯೋಧರ ಸಮಾಧಿಗಳ ಮುಂದೆ ಇಬ್ಬರು ಉಕ್ರೇನ್ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡಿರುವ ಘಟನೆ ವರದಿಯಾಗಿದೆ.
ಸಹೋದರಿಯರು ಎನ್ನಲಾದ ಇಬ್ಬರು ಯುವತಿಯರೇ ಉಕ್ರೇನ್ನ ಕೀವ್ ನಗರದ ಹುತಾತ್ಮಯೋಧರ ಸಮಾಧಿಗಳ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿದವರು.
ಇವರು ಆ ಆಕ್ಷೇಪಾರ್ಹ ವಿಡಿಯೊವನ್ನು vl_lindermann ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದರು. ಈ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಯುವತಿಯರು ಆ ವಿಡಿಯೊವನ್ನು ಅಳಿಸಿ ಹಾಕಿ, ಕ್ಷಮೆ ಕೇಳಿದ್ದರು.
ಆದರೆ, ಅನೇಕರು ಈ ಯುವತಿಯರ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರಿಂದ ಯುವತಿಯರು ಸಂಕಷ್ಟ ಎದುರಿಸುತ್ತಿದ್ದಾರೆ. ಆರೋಪ ಸಾಬೀತಾದಾರೆ ಐದು ವರ್ಷಗಳವರೆಗೆ ಯುವತಿಯರಿಗೆ ಜೈಲು ಶಿಕ್ಷೆ ವಿಧಿಸಬಹುದಾದಿಗೆ ಎಂದು ಎನ್ಡಿಟಿವಿ ವರದಿ ಮಾಡಿದೆ.
2022 ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಇದಕ್ಕೆ ಎದೆಗೊಟ್ಟು ಹೋರಾಡುತ್ತಿರುವ ಉಕ್ರೇನ್ ಸೈನಿಕರು ರಷ್ಯಾಕ್ಕೆ ತಲೆಬಾಗಿಲ್ಲ. ಯುದ್ಧದಲ್ಲಿ ಉಕ್ರೇನ್ನ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.