ADVERTISEMENT

Russia Ukraine War: ರಷ್ಯಾ ದೊಡ್ಡ ಬೆಲೆ ತೆರಲಿದೆ: ಝೆಲೆನ್‌ಸ್ಕಿ ಎಚ್ಚರಿಕೆ

ಐಎಎನ್ಎಸ್
Published 19 ಮಾರ್ಚ್ 2022, 1:19 IST
Last Updated 19 ಮಾರ್ಚ್ 2022, 1:19 IST
ವೊಲೊಡಿಮಿರ್‌ ಝೆಲೆನ್‌ಸ್ಕಿ (ಐಎಎನ್‌ಎನ್ ಚಿತ್ರ)
ವೊಲೊಡಿಮಿರ್‌ ಝೆಲೆನ್‌ಸ್ಕಿ (ಐಎಎನ್‌ಎನ್ ಚಿತ್ರ)   

ಕೀವ್: ಉಕ್ರೇನ್ ವಿರುದ್ಧದ ಸಂಘರ್ಷಕ್ಕಾಗಿ ರಷ್ಯಾ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ, ಕಳೆದ 25 ವರ್ಷಗಳಲ್ಲಿ ರಷ್ಯಾ ಸಾಧಿಸಿದ ಎಲ್ಲವನ್ನೂ ಅವರು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾದ ವಿಶೇಷ ಸೇನಾ ಕಾರ್ಯಾಚರಣೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಲವು ನಿರ್ಬಂಧಗಳನ್ನು ಹೇರಿವೆ.

ರಷ್ಯಾ ಉಗಮದ ಅದೇ 90ರ ದಶಕದ ದುರಂತಕ್ಕೆ ಮರಳಲಿದೆ. ಇದು ರಷ್ಯಾದ ಪತನ, ನೋವಿನ ಪತನ. ಅದನ್ನು ಅವರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ರಷ್ಯಾದೊಂದಿಗಿನ ಮಾತುಕತೆಯಲ್ಲಿ ಉಕ್ರೇನ್ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅಧ್ಯಕ್ಷೀಯ ಕಚೇರಿಯ ಸಲಹೆಗಾರ ವೈಖೈಲೊ ಪೊಡೊಲ್ಯಾಕ್ ಶುಕ್ರವಾರ ಹೇಳಿದ್ದಾರೆ.

ಕದನ ವಿರಾಮ ಘೋಷಣೆ, ಸೇನೆ ಹಿಂತೆಗೆದುಕೊಳ್ಳುವುದು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.