
ಮತ್ತಷ್ಟು ತೆರಿಗೆ: ಪ್ರಧಾನಿ ಇಂಗಿತ
ನವದೆಹಲಿ, ಫೆ. 2 (ಪಿಟಿಐ): ಭೂಕಂಪದಿಂದಾಗಿ ಗುಜರಾತಿನಲ್ಲಿ ಆಗಿರುವ ಅಪಾರ ಹಾನಿಯನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ತೆರಿಗೆಗಳನ್ನು ವಿಧಿಸುವ ಇಂಗಿತವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ನೀಡಿದರು.
ವೈಯಕ್ತಿಕ ಮತ್ತು ಕಾರ್ಪೊರೇಟ್ ಆದಾಯದ ಮೇಲೆ ಶೇಕಡಾ 2ರಷ್ಟು ಸರ್‌ಚಾರ್ಜ್ ವಿಧಿಸಲು ಕೇಂದ್ರ ಸಚಿವ ಸಂಪುಟ ನಿನ್ನೆಯಷ್ಟೆ ನಿರ್ಧರಿಸಿತ್ತು. ಆದರೆ, ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ, ‘ಭೂಕಂಪದ ವ್ಯಾಪಕ ಹಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಶೇ 2ರಷ್ಟು ಸರ್‌ಚಾರ್ಜ್ ಏನೇನೂ ಸಾಲದು’ ಎಂದರು.
ವಾಜಪೇಯಿ ಜತೆ ಮಾತಾಡಿದ ಪಾಕಿಸ್ತಾನದ ಮುಷರ‍್ರಫ್
ನವದೆಹಲಿ, ಫೆ. 2 (ಪಿಟಿಐ): ಹದಿನಾರು ತಿಂಗಳುಗಳ ಹಿಂದೆ ಅಧಿಕಾರ ಸ್ವೀಕರಿಸಿದ ನಂತರ ಪಾಕಿಸ್ತಾನ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ‍್ರಫ್ ಅವರು ಇಂದು ಮೊದಲ ಬಾರಿಗೆ ಭಾರತದ ಪ್ರಧಾನಿ ವಾಜಪೇಯಿ ಅವರ ಜತೆ 5 ನಿಮಿಷ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.