ADVERTISEMENT

25 ವರ್ಷಗಳ ಹಿಂದೆ ಈ ದಿನ | ಸೋಮವಾರ 02–03–1998

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 23:30 IST
Last Updated 1 ಮಾರ್ಚ್ 2023, 23:30 IST
   

ಮತ ಎಣಿಕೆ ಕಾರ್ಯ ಇಂದು

ನವದೆಹಲಿ, ಮಾರ್ಚ್ 1 (ಪಿಟಿಐ)– ಲೋಕಸಭೆಯ 543 ಕ್ಷೇತ್ರಗಳ ಪೈಕಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿರುವ 533 ಸ್ಥಾನಗಳು, ತ್ರಿಪುರಾ, ಗುಜರಾತ್ ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ಬೆಳಿಗ್ಗೆ ಬಿಗಿ ಭದ್ರತಾ ವ್ಯವಸ್ಥೆಯೊಂದಿಗೆ ಆರಂಭವಾಗುವುದು.

ದೇಶದಾದ್ಯಂತ 870 ಪಟ್ಟಣಗಳಲ್ಲಿ ಮತ ಎಣಿಕೆಗಾಗಿ 1,400 ಕೇಂದ್ರಗಳನ್ನು ಸ್ಥಾಪಿಸ ಲಾಗಿದ್ದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುವುದು. ಇದಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ADVERTISEMENT

***

ಸುಬ್ಬುಲಕ್ಷ್ಮಿ, ಕಲಾಂ ಸೇರಿ ಐವರಿಗೆ ‘ಭಾರತ ರತ್ನ’ ಪ್ರದಾನ

ನವದೆಹಲಿ, ಮಾರ್ಚ್ 1 (ಪಿಟಿಐ)– ಖ್ಯಾತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ರಕ್ಷಣಾ ಸಚಿವರ ವಿಜ್ಞಾನ ಸಲಹೆಗಾರ ಅಬ್ದುಲ್ ಕಲಾಂ ಅವರಲ್ಲದೆ ಮೂವರು ಗಣ್ಯರಿಗೆ ಮರಣೋತ್ತರವಾಗಿ ನೀಡಲಾದ ‘ಭಾರತ ರತ್ನ’ ಪ್ರಶಸ್ತಿಯನ್ನು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಪ್ರದಾನ ಮಾಡಿದರು.

ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರಾಯ್, ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಮತ್ತು ಮಾಜಿ ಪ್ರಧಾನಿ ಗುಲ್ಜಾರಿಲಾಲ್‌ ನಂದಾ ಅವರಿಗೆ ಮರಣೋತ್ತ ರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.